ಬೈಕ್ ರ್ಯಾಲಿ ಮೂಲಕ ಅಂಬೇಡ್ಕರ್ ಜನ್ಮ ದಿನ

15blrp2
ಬೇಲೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಪ್ರಬುದ್ಧ ಭೀಮ ಯುವಕರ ಬಳಗದ ಸದಸ್ಯರು ಭಾನುವಾರ ಬೈಕ್‌ರ‌್ಯಾಲಿ ಮೂಲಕ ಅಂಬೇಡ್ಕರ್ ಜನ್ಮದಿನ ಆಚರಿಸಿದರು.
Published on

ಬೇಲೂರು :ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕಿನ ಹಾರೋಹಳ್ಳಿ ಗ್ರಾಮದ ಪ್ರಬುದ್ಧ ಭೀಮ ಯುವಕರ ಬಳಗದ ಸದಸ್ಯರು ಭಾನುವಾರ ಬೈಕ್‌ ರ್ಯಾಲಿ ಮೂಲಕ ಬೇಲೂರಿಗೆ ತೆರಳಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾಹಾರ ಸಲ್ಲಿಸಿ ಗೌರವಿಸಿದರು. ಬೈಕ್ ರ‌್ಯಾಲಿಯಲ್ಲಿ ಆಗಮಿಸಿದ ಹಾರೋಹಳ್ಳಿ ಗ್ರಾಮದ ಪ್ರಬುದ್ಧ ಭೀಮ ಯುವಕರ ಬಳಗದ ಸದಸ್ಯರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿದ್ದಲ್ಲದೆ ಗ್ರಾಮಸ್ಥರಿಗೆ ಸಿಹಿ ಹಂಚಿದರು. ನಂತರದಲ್ಲಿ ದಾರಿಯುದ್ದಕ್ಕೂ ಅಂಬೇಡ್ಕರ್ ಅವರ ಕುರಿತು ಘೋಷಣೆಗಳನ್ನು ಕೂಗಿದರು. ನಂತರ ಬೇಲೂರು ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದಸಂಸ (ಅಂಬೇಡ್ಕರ್‌ವಾದ) ತಾಲೂಕು ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net