ಸಹಬಾಳ್ವೆ, ಸಮಾನತೆಗೆ ವೇದಿಕೆ ನಿರ್ಮಿಸಿದವರು: ಕೆ.ಎಂ.ಕೆ.ಮಂಜನಾಡಿ ಬಣ್ಣನೆ

45
Published on

ಉಳ್ಳಾಲ: ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢಶಾಲೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.

ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ವ್ಯಕ್ತಿಯಾಗದೆ ದೇಶದ ಅತ್ಯಮೂಲ್ಯ ಆಸ್ತಿ ಮತ್ತು ಶಕ್ತಿಯಾಗಿ ಬೆಳೆದವರು. ಅವರು ನಿರ್ಮಿಸಿದ ಸಂವಿಧಾನದಿಂದಾಗಿ ನಾವೆಲ್ಲರೂ ಪರಸ್ಪರ ಸಹಬಾಳ್ವೆ, ಸಮಾನತೆ ಮತ್ತು ಪ್ರೀತಿ ವಿಶ್ವಾಸದಿಂದ ಬಾಳುವಂತಾಗಿದೆ ಎಂದು ಮುಖ್ಯಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಹೇಳಿದರು.

ಶಿಕ್ಷಕಿಯರಾದ ಸಪ್ನಾ, ಹಸಿನ್‌ತಾಜ್, ಬಬಿತಾ, ಸೆಲಿನ್ ಡಿಸೋಜ, ವೀಣಾ, ಸುಮಾ, ಮೋನಿಷ, ಶಾಲಾ ವಿದ್ಯಾರ್ಥಿಗಳು, ಬಿಸಿಯೂಟ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net