

ರಬಕವಿ/ಬನಹಟ್ಟಿ : ರಬಕವಿ- ಬನಹಟ್ಟಿ ತಹಸೀಲ್ದಾರ ಕಾರ್ಯಾಲಯದಲ್ಲಿ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ 68ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಶಾಸಕ ಸಿದ್ದು ಸವದಿ ಪೂಜೆ ಸಲ್ಲಿಸಿದರು.
ಶುಕ್ರವಾರ ತಾಲೂಕು ಆಡಳಿತ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳಾದ ಬಾಬಾ ಸಾಹೇಬ್ ಅಥವಾ ಭಾರತೀಯ ಸಂವಿಧಾನದ ಪಿತಾಮಹ ಎಂದು ನಮಗೆ ಹೆಚ್ಚು ಆತ್ಮೀಯವಾಗಿ ಪರಿಚಿತರಾದ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಡಿ. 5, 1956 ರಂದು ತಮ್ಮ ನಿದ್ರೆಯಲ್ಲಿದ್ದಾಗ ಕೊನೆಯುಸಿರೆಳೆದರು. ಸಮಾಜಕ್ಕೆ ಡಾ. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು, ಈ ದಿನವನ್ನು ಭಾರತದಾದ್ಯಂತ ಮಹಾಪರಿನಿರ್ವಾಣ ದಿವಸ್ ಎಂದು ಆಚರಿಸಲಾಗುತ್ತದೆ ಎಂದರು.
ತಹಸೀಲ್ದಾರ ಗಿರೀಶ ಸ್ವಾದಿ, ಸಮಾಜದ ಮುಖಂಡರಾದ ಬಾಬು ಮಹಾಜನ, ಚಂದ್ರು ಹರಿಜನ, ಶಿವಲಿಂಗ ಗೊಂಬಿಗುಡ್ಡ, ಶ್ರೀಶೈಲ ಗಾಂಜಿ, ಪ್ರಭಾಕರ ಚಲವಾದಿ, ಪರಶುರಾಮ ಮಣ್ಣವ್ವಗೋಳ, ಇಲಾಖೆಯ ಮಂಜುನಾಥ ಆಲಗೂರ. ತುಕಾರಾಮ ಉಪ್ಪಾರ. ಸುಭಾಸ ಲಮಾಣಿ. ವಸಂತ ಹಿರೇಮಠ ಅನೇಕರಿದ್ದರು.