ಅಂಬೇಡ್ಕರ್‌ರವರ ೬೭ನೇ ಮಹಾ ಪರಿನಿರ್ವಾಣ ದಿನ

ambedkar
Published on

ಮಡಿಕೇರಿ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೭ನೇ ಮಹಾ ಪರಿನಿರ್ವಾಣ ದಿನ ಇತ್ತೀಚೆಗೆ ಜರುಗಿತು.


ನಗರಸಭೆ ಪೌರಾಯುಕ್ತ ವಿಜಯ್‌ರವರು ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಅಂಬೇಡ್ಕರ್‌ರವರ ವಿಚಾರಧಾರೆ ತಿಳಿಸಿಕೊಟ್ಟರು.


ತಾಲೂಕಿನ ಸಮಾನ ಮನಸ್ಕರು, ಸಮಾಜ ಚಿಂತಕರು, ಎಲ್ಲ ಸರ್ವ ಜನಾಂಗ ಸೇರಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ಪ್ರಮುಖರಾದ ಮೋಹನ್ ಮೌರ್ಯ, ಹುಸೇನ್, ಜನಾರ್ಧನ್, ಜಯರಾಮ್, ಪ್ರೇಮಕುಮಾರ್, ಚಂದ್ರಮೌಳಿ ಹಾಗೂ ಅಶೋಕಪುರ ಹಾಗೂ ಉಕ್ಕುಡ ಗ್ರಾಮಸ್ಥರು ಸೇರಿ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.


ವಕೀಲರು ಹಾಗೂ ಚಿಂತಕರಾದ ಕುನ್ನಿ ಅಬ್ದುಲ್ಲಾ, ಪ್ರಮುಖರಾದ ಹರೀಶ್ ಕಾಳಯ್ಯ ಮತ್ತು ಡಿಎಸ್‌ಎಸ್ ದಿವಾಕರ್, ಜಿ.ಎಸ್.ವಿನಯ್ ಕುಮಾರ್, ಹಿರಿಯರಾದ ಪ್ರೊ.ಅಥಿನಿ ಮಹದೇವ, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕುಮಾರ್, ಶಿಕ್ಷಣ ಅಧಿಕಾರಿ ಕೃಷ್ಣಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net