ಸಚಿವರ ಭೇಟಿ, ಅಂಬೇಡ್ಕರ್ ಭವನ ಬಾಗಿಲು ಮುರಿದು ಒಳ ಪ್ರವೇಶ

11cmy8
Published on

ಚಿಕ್ಕಬಳ್ಳಾಪುರ: ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಚಿಂತಾಮಣಿ ನಗರದ ಅಂಬೇಡ್ಕರ್ ಭವನದ ಕಾಮಗಾರಿ ವೀಕ್ಷಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ದಿಢೀರನೇ ಕಲ್ಲಿನಿಂದ ಬಾಗಿಲು ಬೀಗವನ್ನು ಹೊಡೆದು ಒಳ ಪ್ರವೇಶಿಸಲಾಗಿದೆ.
ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಒಂದು ದಿನ ಮೊದಲೇ ಸಚಿವರ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದರೂ ಸಂಬಂಧಪಟ್ಟವರು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ. ಇನ್ನೇನು ಸಚಿವರು ಬಂದರೂ ಎನ್ನುವಾಗ ಬಾಗಿಲು ಕೀ ಹುಡುಕುತ್ತಿದ್ದಾರೆ. ಆದರೆ, ಯಾರೂ ತಂದಿರಲಿಲ್ಲ. ಇದರ ಬಗ್ಗೆ ದಲಿತ ಸಂಘಟನೆಗಳು ಪ್ರಶ್ನಿಸಿದಾಗ ಗುತ್ತಿಗೆದಾರನ ಮೇಲೆ ಹೊಣೆ ಹಾಕಲಾಗಿದೆ. ಹಾಗೆಯೇ ಬಾಗಿಲ ಬಳಿಯೇ ಇದ್ದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮೂಲ್ಯ ಮತ್ತು ಕಿರಿಯ ಸಹಾಯಕ ಇಂಜಿನಿಯರ್ ಮಧು ತಕ್ಷಣ ಅಂಬೇಡ್ಕರ್ ಭವನದ ಡೋರ್‌ನ್ನು ಕಾರ್ಮಿಕರೊಬ್ಬರ ಕಲ್ಲಿನಿಂದ ಹೊಡೆಸಿ, ತೆಗೆಸಲಾಯಿತು.

ಕೊನೆಗೆ ಸಚಿವರು ಬಂದು ಕಾಮಗಾರಿಯನ್ನು ವೀಕ್ಷಿಸಿದರು. ತ್ವರಿತವಾಗಿ ಬಾಕಿ ಉಳಿದಿರುವ ಕೆಲಸವನ್ನು ಗುಣಮಟ್ಟದಿ೦ದ ಮುಗಿಸಲು, ಈಗಾಗಲೇ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net