ಅಂಬೇಡ್ಕರ್ ಯುವಸೇನೆ ಕಾರ್ಯಾಲಯ ಉದ್ಘಾಟನೆ

pdb
Published on

ಪಡುಬಿದ್ರಿ: ಅಂಬೇಡ್ಕರ್ ತತ್ವಾದರ್ಶಗಳ ಪಾಲನೆಯಲ್ಲಿ ನಿರತವಾದ ಸಂಟನೆಗೆ ಗ್ರಾಪಂ ಕಟ್ಟಡದ ಕೊಠಡಿಯನ್ನು ಪಂಚಾಯಿತಿ ನೀಡಿದೆ. ಇಲ್ಲಿ ಲೋಕಹಿತ ಕಾರ್ಯಗಳು, ಅಸವಾನತೆಯನ್ನು ತೊಡೆದು ಹಾಕುವ, ಅಂಬೇಡ್ಕರ್ ತತ್ವಗಳನ್ನು ಜನರಿಗೆ ತಲುಪಿಸುವ ಕಾರ್ಯಗಳಾಗಲಿ ಎಂದು ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ.ಹೇಳಿದರು.

ಪಡುಬಿದ್ರಿ ಗ್ರಾಪಂ ಕಟ್ಟಡದಲ್ಲಿ ಆರಂಭಿಸಲಾದ ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಟಕದ ಕಾರ್ಯಾಲಯವನ್ನು ಭಾನುವಾರ ಉದ್ಘಾಟಿಸಿ ವಾತನಾಡಿದರು.

ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ.ಶೆಟ್ಟಿ, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು, ಕಾಪು ಬ್ಲಾಕ್ ಕಾಂಗ್ರೆಸ್(ದ) ಅಧ್ಯಕ್ಷ ವೈ.ಸುಕುವಾರ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೇರ್ಗಿ, ಉದ್ಯಮಿ ಗಣೇಶ್ ಗುಜರಾನ್, ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉಪಸ್ಥಿತರಿದ್ದರು. ಕೃಷ್ಣ ಪಿ.ಬಂಗೇರ ವಂದಿಸಿದರು. ವಕೀಲ ರಾಜೇಶ್ ಪಡುಬಿದ್ರಿ ಹಾಗೂ ಸುಶ್ಮಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net