ಕಣಜವಾಗಿದ್ದ ಅಂಬೇಡ್ಕರ್

school
Published on

ಸಿಂಧನೂರು: ತಾಲೂಕಿನ ದುಗ್ಗಮ್ಮನಗುಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಉದ್ಘಾಟಿಸಲಾಯಿತು.

ಮುಖ್ಯಶಿಕ್ಷಕ ಶಂಕರದೇವರು ಹಿರೇಮಠ ಮಾತನಾಡಿ, ಅಂಬೇಡ್ಕರ್ ಜ್ಞಾನದ ಕಣಜವಾಗಿದ್ದು ಅವರು ಪಡೆದ ಪದವಿ, ಓದಿನಲ್ಲಿ ಹೊಂದಿದ್ದ ಅಭಿರುಚಿ ನಮಗೆಲ್ಲ ಮಾದರಿಯಾಗಿದೆ. ಈ ಗ್ರಂಥಾಲಯ ಮಕ್ಕಳಿಗೆ ಪ್ರಿಯವಾದ ಕಥೆ, ಚಿತ್ರಕಥೆ, ಶಿಶುಪ್ರಾಸಗಳ ಪುಸ್ತಕಗಳನ್ನು ಒಳಗೊಂಡಿದೆ. ನಾಡಿನ ಹಿರಿಯ, ಕಿರಿಯ ಸಾಹಿತಿಗಳು ಬರೆದ ಕೃತಿಗಳು, ಚಂಪಕ, ಬಾಲಮಂಗಳ, ಮಾಸಪತ್ರಿಕೆ, ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಕಥಾ ಪುಸ್ತಕಗಳಿವೆ. ಅವುಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪುಸ್ತಕ ವಿತರಣೆ

ತಳಿರು, ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಸಂತಸದಿಂದ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲಾಯಿತು. ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net