

ಮಂಡ್ಯ: ರಾಜ್ಯ ಸರ್ಕಾರ ಮೇ 12ರಂದು ಗೌತಮ ಬುದ್ಧರ ಜಯಂತಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂದು ರಜೆ ಘೋಷಣೆ ಮಾಡಬೇಕೆಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಗಂಗರಾಜು ಮನವಿ ಮಾಡಿದರು.
ಬೌದ್ಧ ಧರ್ಮವೂ ರಾಷ್ಟ್ರದಲ್ಲಿಯೇ ಸೃಷ್ಟಿಯಾಗಿದೆ. ಆದರೆ ಜಯಂತಿ ಆಚರಣೆ ಮಾಡುವ ಸರ್ಕಾರ ರಜೆ ಘೋಷಣೆ ಮಾಡದಿರುವುದು ನಿರಾಸೆಯನ್ನುಂಟು ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನಾಡಗೀತೆಯಲ್ಲಿ ಬೌದ್ಧ ಎಂದು ಬುದ್ಧರ ಹೆಸರನ್ನು ಸೇರಿಸಬೇಕು. ಅಂತೆಯೇ ಬೌದ್ಧ ಧಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಒಂದು ಸಾವಿರ ಕೋಟಿ ರೂ ಅನುದಾನ ನೀಡಬೇಕು. ಬೌದ್ಧ ಧಮ್ಮಕ್ಕೆ ಮತಾಂತರಗೊಂಡರೆ ಮಹಾರಾಷ್ಟ್ರ ರಾಜ್ಯದ ಮಾದರಿ ಪರಿಶಿಷ್ಟ ಜಾತಿ, ವರ್ಗದ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರೆಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಮೋಹನ್‌ಕುಮಾರ್, ನರಸಿಂಹಮೂರ್ತಿ, ಎಂ.ಬಿ.ನಾಗಣ್ಣಗೌಡ, ಪ್ರಸನ್ನ, ನಿರಂಜನ್, ಲೋಕೇಶ್ ಇತರರಿದ್ದರು.