ಅಂಬೇಡ್ಕರ್ ಜ್ಞಾನದ ದಾರಿಯೇ ನಿತ್ಯನಿರಂತರ

kota-9
Published on

ಕೋಟ: ಸಹಸ್ರಮಾನಗಳ ಇತಿಹಾಸ ಕಂಡ ಭರತವರ್ಷ ಅಸಮಾನತೆಯ ಸಂಘರ್ಷದ ಹೋರಾಟ ನಿರಂತರ. ಯುಗಪ್ರವರ್ತಕರಾಗಿ ಶೋಷಿತ ಸಮುದಾಯದ ದನಿಯಾದ ಬಾಬಾಸಾಹೇಬರು ಹಾಕಿಕೊಟ್ಟ ಜ್ಞಾನದ ದಾರಿಯೇ ನಿತ್ಯನಿರಂತರ ಎಂದು ಕೋಟ ವಿವೇಕ ವಿದ್ಯಾಸಂಸ್ಥೆ ಶಿಕ್ಷಕ ಸಂಜೀವ ಗುಂಡ್ಮಿ ಹೇಳಿದರು.

ಮಣೂರು ಪಡುಕರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಎಸ್‌ಎನ್‌ಎಲ್ ಅಭಿಯಂತ ಪ್ರಭಾಕರ ಮಣೂರು ಪಡುಕರೆ ಮಾತನಾಡಿ, ಬಾಬಾ ಸಾಹೇಬರು ಭಾರತೀಯ ಸಮಾಜವನ್ನು ಜಾತಿ ವ್ಯವಸ್ಥೆಯಿಂದ ಮುಕ್ತಗೊಳಿಸಲು ನಿರಂತರ ಹೋರಾಟ ಮಾಡಿದರು ಎಂದರು.

ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮಣೂರು ಪಡುಕರೆ ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಕುಂದರ್, ಗೀತಾನಂದ ಫೌಂಡೇಶನ ನಿರ್ವಾಹಕ ರವಿಕಿರಣ್, ಕೋಟ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಉಪಸ್ಥಿತರಿದ್ದರು.

ಕನ್ನಡ ಶಿಕ್ಷಕ ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಹಿರಿಯ ಶಿಕ್ಷಕ ರಾಮದಾಸ್ ನಾಯಕ್ ಸ್ವಾಗತಿಸಿದರು. ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ ವಂದಿಸಿದರು. ಅನುಶ್ರೀ, ಪೂರ್ವಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net