ಕೋರ್ಟ್ ಮುಂದೆ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿ

12-DVD-2
ದೇವದುರ್ಗದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಛಲವಾದಿ ಯುವಾ ಬ್ರಿಗೇಡ್ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಬಸವರಾಜ ನಾಗರಾಳ, ಪ್ರಮುಖರಾದ ರಮೇಶ ಗಬ್ಬೂರು, ಮೈನುದ್ದೀನ್ ಹೌದೊಡ್ಡಿ, ನಾಗರಾಜ ಶಾವಂತಗೇರಾ, ಸಿ.ರಮೇಶ ಇತರರಿದ್ದರು.
Published on

ದೇವದುರ್ಗ: ಪಟ್ಟಣ ಹೊರವಲಯದ ಅಂಚೆಸೂಗೂರು ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ತಾಲೂಕು ನ್ಯಾಯಾಲಯ ಆವರಣದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಛಲವಾದಿ ಯುವಾ ಬ್ರಿಗೇಡ್ ಮುಖಂಡರು ಶುಕ್ರವಾರ ಮನವಿ ಸಲ್ಲಿಸಿದರು.

ಡಾ.ಅಂಬೇಡ್ಕರ್ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದು, ಸಂವಿಧಾನ ಎನ್ನುವ ಮಹಾ ಗ್ರಂಥ ನೀಡಿದ್ದಾರೆ. ವಿಶ್ವದ ಅನೇಕ ದೇಶಗಳ ಸಂವಿಧಾನ ಅಧ್ಯಯನ ಮಾಡಿ, ವಿಶ್ವದ ಬೃಹತ್, ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಅವರು ರಚಿಸಿದ ಸಂವಿಧಾನದ ಆಧಾರದಲ್ಲಿ ನ್ಯಾಯ ತೀರ್ಮಾನ ಮಾಡಲಾಗುತ್ತಿದೆ. ನ್ಯಾಯಾಲಯ ಆವರಣದಲ್ಲಿ ಅವರ ಪುತ್ಥಳಿ ನಿರ್ಮಿಸಿದರೆ ಅರ್ಥ ಬರಲಿದೆ. ಅಲ್ಲದೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ಹೀಗಾಗಿ ಪ್ರತಿಯೊಂದು ಸಮಾಜಕ್ಕೆ ನ್ಯಾಯ ಕೊಟ್ಟಿರುವ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಕೋರ್ಟ್ ಆವರಣದ ಮುಂದೆ ಅವರ ಪುತ್ಥಳಿ ನಿರ್ಮಾಣ ಮಾಡಬೇಕು. ಅಲ್ಲದೆ ಎಲ್ಲ ಜಿಲ್ಲಾ ನ್ಯಾಯಾಲಯ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಬಸವರಾಜ ನಾಗರಾಳ, ಪ್ರಮುಖರಾದ ರಮೇಶ ಗಬ್ಬೂರು, ಮೈನುದ್ದೀನ್ ಹೌದೊಡ್ಡಿ, ನಾಗರಾಜ ಶಾವಂತಗೇರಾ, ಬಸಲಿಂಗಪ್ಪ ನಾಗವಂಶ, ಸಿ.ರಮೇಶ, ನಾಗರಾಜ ವಾರದ್, ನರಸಿಂಹ ಭೋವಿ, ಮೌನೇಶ ಜಿನ್ನಾಪುರ, ಮಲ್ಲಯ್ಯ ಕಟ್ಟಿಮನಿ, ಮಲ್ಲಿಕಾರ್ಜನ ಹಳ್ಳಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net