

ಮೈಸೂರು: ಡಾ.ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಸ್ನೇಹ ಸೌಹಾರ್ದ ಸಂಘದ ವತಿಯಿಂದ ಅಂಬೇಡ್ಕರ್ ಪರಿನಿಬ್ಬಾಣ ಪ್ರಯುಕ್ತ ಡಿ.6 ರಂದು ಸಂಜೆ 6ಕ್ಕೆ ಲಲಿತಮಹಲ್ ಮೈದಾನದಲ್ಲಿ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪ್ರದೀಪ್ ಕುಮಾರ್ ಹೇಳಿದರು.
ಸೋಸಲೆ ಗಂಗಾಧರ್ ತಂಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಸಂದರ್ಭ ಅಂಬೇಡ್ಕರ್ ಅವರ ಕೊನೆಯ ದಿನಗಳ ಚಿತ್ರವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಿ ನಂತರ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎನ್.ಬಸವರಾಜು, ಜಯಶಂಕರ್, ವೈ.ಎಂ.ರಂಗಸ್ವಾಮಿ, ಮಂಟೇಲಿಂಗಯ್ಯ, ಮುನಿಸ್ವಾಮಿ ಇದ್ದರು.