ಬೌದ್ಧ ಧರ್ಮವನ್ನು ಅಂಬೇಡ್ಕರ್ ಪುನರುತ್ಥಾನಗೊಳಿಸಿದರು: ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ

Ambedkar
Published on

ಮೈಸೂರು: ದೇಶದ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದ್ದ ಬೌದ್ಧ ಧರ್ಮ ಜನಮಾನಸದಲ್ಲಿ ಅಳಿದುಹೋಗಿತ್ತು. ಅದನ್ನು 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುನರುತ್ಥಾನಗೊಳಿಸಿದರು ಎಂದು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ 66ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಬುದ್ಧನ ಅಷ್ಟಾಂಗ ಮಾರ್ಗಪಾಲನೆ ಹಾಗೂ ಪಂಚಶೀಲ ತತ್ವ ಪರಿಪಾಲನೆಯ ಪ್ರತಿಜ್ಞಾವಿಧಿಯನ್ನು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಬಾಸಾಹೇಬರೇ ಹೇಳುವಂತೆ ಹಿಂದೂ ಧರ್ಮದಿಂದ ಅವರು ಮತಾಂತರಗೊಳ್ಳಲಿಲ್ಲ. ಮಾತೃಧರ್ಮಕ್ಕೆ ಮರಳಿದರು. ಬುದ್ಧನ ತತ್ವಗಳೇ ಜಗದ ಬೆಳಕಾಗಿವೆ ಎಂದು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net