ಬಿಜೆಪಿ ಸರ್ಕಾರದಿಂದ ಕ್ರಮ ಅಸಾಧ್ಯ

090222 Gejjalagatta CPIML Protest
ಹಟ್ಟಿಚಿನ್ನದಗಣಿ ಸಮೀಪದ ಗೆಜ್ಜಲಗಟ್ಟಾದಲ್ಲಿ ನಾಡ ತಹಸೀಲ್ದಾರ್ ರಂಗಪ್ಪ ನಾಯಕ್ ದೊರೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
Published on

ಹಟ್ಟಿಚಿನ್ನದಗಣಿ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲವೆಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಆರೋಪಿಸಿದರು.

ಸಮೀಪದ ಗೆಜ್ಜಲಗಟ್ಟಾ ವಲಯದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗೆಜ್ಜಲಗಟ್ಟಾ ಗ್ರಾಪಂ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಬುಧವಾರ ಮಾತನಾಡಿದರು. ಸಂವಿಧಾನದ ಪಾವಿತ್ರ್ಯತೆಗೆ ಕುಂದು ತಂದಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು, ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬಿತ್ತುವುದರ ಬದಲಿಗೆ ಸರ್ವಧರ್ಮ ಸಮಾನತೆ ಪ್ರತಿಪಾದಿಸಬೇಕೆಂದರು.

ವೀರಾಪೂರ ಗ್ರಾಮದಿಂದ ಗೆಜ್ಜಲಗಟ್ಟಾವರೆಗೆ ರ‌್ಯಾಲಿ ನಡೆಸಲಾಯಿತು. ಗುರುಗುಂಟಾ ನಾಡ ತಹಸೀಲ್ದಾರ್ ರಂಗಪ್ಪ ನಾಯಕ್ ದೊರೆಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net