ಅಂಬೇಡ್ಕರ್ ತತ್ವಾದರ್ಶ ಮೈಗೂಡಿಸಿಕೊಳ್ಳಿ

Untitled design
ದೇವದುರ್ಗ ತಾಲೂಕಿನ ರಾಮದುರ್ಗದಲ್ಲಿ ಮನೆಮನೆಗೆ ಅಂಬೇಡ್ಕರ್ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಪ್ರಭು ಮರೆಡ್ಡಿ, ಗೌರವ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಹೋರಾಟಗಾರ ಎಂ.ಆರ್.ಭೇರಿ, ರಾಮಾಂಜನೇಯ ಭಜಂತ್ರಿ, ತಾಲೂಕು ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಆಂಜಿನೇಯ ಜೆ.ಜಾಡಲದಿನ್ನಿ, ಸದಸ್ಯರಾದ ನಾಗಾರ್ಜುನ, ಶಿವಕುಮಾರ್ ಇದ್ದರು.
Published on

ದೇವದುರ್ಗ: ಸಮಾಜದಲ್ಲಿ ಪ್ರತಿಯೊಬ್ಬರು ಜಾತಿ, ಧರ್ಮ, ಲಿಂಗಭೇದವಿಲ್ಲದೆ ಸಮಾನತೆಯಿಂದ ಬದುಕಬೇಕು ಎಂದು ಉಪನ್ಯಾಸಕ ಪ್ರಭು ಮರೆಡ್ಡಿ ಹೇಳಿದರು.


ತಾಲೂಕಿನ ರಾಮದುರ್ಗದಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ 78ನೇ ಸರಣಿ ಮನೆಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಎಲ್ಲರಿಗೂ ಕಾನೂನುಬದ್ಧ ಹಕ್ಕು ನೀಡಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ಪ್ರತಿಯೊಬ್ಬರೂ ಅವರ ತತ್ವಾದರ್ಶ ಮೈಗೂಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.


ಬಹುಜನ ಸಂಘಷರ್ ಸಮಿತಿ ಗೌರವ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಮಾತನಾಡಿ, ಅಂಬೇಡ್ಕರ್ ನೀಡಿರುವ ಕೊಡುಗೆ ಜನರಿಗೆ ತಿಳಿಸಲು ಪ್ರತಿ ಭಾನುವಾರ ಮನೆಮನೆಗೆ ಅಂಬೇಡ್ಕರ್ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.


ಹೋರಾಟಗಾರ ಎಂ.ಆರ್.ಭೇರಿ, ರಾಮಾಂಜನೇಯ ಭಜಂತ್ರಿ, ತಾಲೂಕು ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಆಂಜಿನೇಯ ಜೆ.ಜಾಡಲದಿನ್ನಿ, ಸದಸ್ಯರಾದ ನಾಗಾರ್ಜುನ, ಶಿವಕುಮಾರ್, ಬಸವರಾಜ್, ಹನುಮೇಶ ನಾಯಕ, ನರಸಿಂಹ ನಾಯಕ, ಶಿವಲಿಂಗಪ್ಪ, ಚಂದ್ರು, ಮುದೆಪ್ಪ ಮುಷ್ಟೂರು, ಪದ್ದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net