ದಲಿತರು ಬುದ್ಧನನ್ನು ಆರಾಧಿಸುವುದು ಅಗತ್ಯ: ಜಯನ್​ ಮಲ್ಪೆ

udp-6-parinirvana
Published on

ಉಡುಪಿ: ದಲಿತರು ಹಿಂದೆಯೂ ಹಿಂದೂಗಳಾಗಿರಲಿಲ್ಲ. ದಲಿತರು ತಮ್ಮ ಮನೆಗಳಲ್ಲಿರುವ ದೇವರ ಪೋಟೋ ತೆಗೆದು ಬುದ್ಧ ಚಿಂತನೆ ಮಾಡಿದರೆ ಮಾತ್ರ ಸಮಾಜ ಪರಿವರ್ತನೆಯಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ದಲಿತ ಚಿಂತಕ ಜಯನ್​ ಮಲ್ಪೆ ಹೇಳಿದ್ದಾರೆ.

ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್​ ಯುವಸೇನೆ ಮಲ್ಪೆ ನಗರ ಶಾಖೆ ಏರ್ಪಡಿಸಿದ ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್​ ಅವರ 67ನೇ ಮಹಾಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶತಶತಮಾನಗಳಿಂದ ದಲಿತರು ಮನೆಗಳಲ್ಲಿ ದೇವರ ಪೋಟೋಗೆ ಪೂಜೆ ಮಾಡಿದರೂ ಅವರ ಮೇಲಿನ ದೌರ್ಜನ್ಯ,ಅಸ್ಪಶ್ಯತೆ ತಡೆಗಟ್ಟಲು ಸಾಧ್ಯವಾಗಿಲ್ಲ. ವೈದಿಕರು ದಲಿತರ ರಾಜಕೀಯ ಅಧಿಕಾವನ್ನು ಕಬಳಿಸಿ ಅವರನ್ನು ಶಾಶ್ವತ ಗುಲಾಮರನ್ನಾಗಿಸಲೆಂದೇ ದೇವರನ್ನು ಸೃಷ್ಟಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್​ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್​ ಸಲ್ಯಾನ್​ ವಹಿಸಿದ್ದರು. ಹೋರಾಟಗಾರ ಸುರೇಶ್​ ಪಾಲನ್​ ಹಾಗೂ ಹಿರಿಯ ದಲಿತ ಮುಖಂಡ ಗಣೇಶ್​ ನೆರ್ಗಿ ಮಾತನಾಡಿದರು. ಯುವನಾಯಕರಾದ ಸಂತೋಷ್​ ಕಪ್ಪೆಟ್ಟು, ಕೃಷ್ಣಶ್ರೀಯಾನ್​, ಪ್ರಸಾದ್​ ಮಲ್ಪೆ, ಅರುಣ್​ ಸಲ್ಯಾನ್​, ದೀಪಕ್​ ಕೊಡವೂರು, ಶಂಕರ್​ ನೆರ್ಗಿ, ವಿನಯ ಬಲರಾಮನಗರ, ಭಗವಾನ್​ ಮಲ್ಪೆ, ಶಶಿಕಲಾ ತೊಟ್ಟಂ, ಪ್ರಮೀಳ ಹರೀಶ್​, ಕಲಾವತಿ, ಸಂಕಿ ತೊಟ್ಟಂ, ವಿನೋದ ಜಯರಾಜ್​, ಸಂಧ್ಯಾ ನೆರ್ಗಿ, ಶಶಿ ತೊಟ್ಟಂ ಮಾ.ಗ್ಯಾಬ್ರಿಯಲ್​, ಮಾ.ಹರ್ಷಿಲ್​ ಉಪಸ್ಥಿತರಿದ್ದರು. ಬಿ.ಎನ್​.ಪ್ರಶಾಂತ್​ ಸ್ವಾಗತಿಸಿ, ಸುಶೀಲ್​ ಕುಮಾರ್​ ಕೊಡವೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net