ಅಂಬೇಡ್ಕರ್ ನವಭಾರತದ ಗೌತಮಬುದ್ಧ: ಎಡಿಸಿ ಡಾ.ಎಚ್.ಎಲ್.ನಾಗರಾಜು ಬಣ್ಣನೆ

Ambedkar Parinirvan Divas mandya
Published on

ಮಂಡ್ಯ: ದೇಶಕ್ಕೆ ಹೊಸಬೆಳಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ನವ ಭಾರತದ ಗೌತಮಬುದ್ಧ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಆಯೋಜಿಸಿದ್ದ 74ನೇ ಸಂವಿಧಾನ ದಿನಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ವರ್ಷದ ಪರಿನಿಬ್ಬಾಣ ದಿನ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ತತ್ವಜ್ಞಾನ ಪ್ರಬುದ್ಧತೆ ಇದ್ದಂತಹ ದೊಡ್ಡ ವ್ಯಕ್ತಿ ಹಾಗೂ ಶಕ್ತಿಯಾಗಿದ್ದರು. ಪ್ರಪಂಚದ ಬಹುತೇಕ ದೇಶ ವರ್ಣ ವ್ಯವಸ್ಥೆಯಿಂದ, ಧರ್ಮ-ಜಾತಿಯ ಉದ್ದೇಶಕ್ಕಾಗಿ ಹಾಗೂ ಬೇರೆ ಕಾರಣಗಳ ತೊಳಲಾಟದಿಂದ ಬಳಲುತ್ತಿರುವವರಿಗೆ ಅಂಬೇಡ್ಕರ್ ಅವರ ಐಡಾಲಜಿ ಚಿಕಿತ್ಸೆಯಾಗಿ ಲಭ್ಯವಾಗುತ್ತಿದೆ. ಪರಿವರ್ತನೆಯ ಹಾದಿಯ ತೋರಿಸುತ್ತಿದೆ ಎಂದು ತಿಳಿಸಿದರು.

ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಪ್ರಾಂಶುಪಾಲ ಪಿ.ಎಸ್.ತಮ್ಮಣ್ಣ, ಮುಖ್ಯ ಆಡಳಿತಾಧಿಕಾರಿ ಕೆ.ಜಾನ್ಸನ್, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಸ್ಥಾನೀಯ ಅಧೀಕ್ಷಕ ಡಾ.ವೆಂಕಟೇಶ್, ಶುಶ್ರೂಷಕ ಅಧೀಕ್ಷಕಿ ಜಯಭಾರತಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಎಲ್.ಎಲ್. ಕ್ಲೆಮಂಟ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್, ಡಾ.ಹರೀಶ್, ಡಾ.ಸವಿತಾ ಇತರರಿದ್ದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾನವಚನ ಸ್ವೀಕರಿಸಲಾಯಿತು. ಗಣ್ಯರಿಗೆ ಸಂವಿಧಾನ ಓದು ಕೃತಿಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net