ಅಂಬೇಡ್ಕರ್ ಪರಿನಿಬ್ಬಾಣ ಅಂಗವಾಗಿ ಮೈಸೂರಿನಲ್ಲಿ ಮೇಣದ ಬತ್ತಿ ಮೆರವಣಿಗೆ

ambedkar parinirvan divas
Published on

ಮೈಸೂರು: ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಮಹಾಸಭಾ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೇಣದ ಬತ್ತಿ ಮೆರವಣಿಗೆ ನಡೆಯಿತು.

ಗಾಂಧಿನಗರದ ಅಂಬೇಡ್ಕರ್ ಪ್ರತಿಮೆಗೆ ಶ್ರೀ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಫೈವ್‌ಲೈಟ್ ವೃತ್ತ, ಇರ್ವಿನ್ ರಸ್ತೆ, ಆಯುರ್ವೇದ ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ ಮೂಲಕ ಸಾಗಿ ಪುರಭವನ ಆವರಣದಲ್ಲಿ ಅಂತ್ಯಗೊಂಡಿತು.

ಈ ಸಂದರ್ಭ ನಗರ ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ಎಪಿಎಂಸಿ ಮಾಜಿ ಸದಸ್ಯ ಜವರಪ್ಪ, ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದೇವಪ್ಪ ನಾಯಕ, ಲೇಖಕ ಭರತ್ ರಾಮಸ್ವಾಮಿ, ಅಂಬೇಡ್ಕರ್ ದಲಿತ ಮಹಾಸಭಾ ಅಧ್ಯಕ್ಷ ಪುಟ್ಟರಂಗಸ್ವಾಮಿ, ಮುಡಾ ಮಾಜಿ ಸದಸ್ಯ ಶಿವಕುಮಾರ್, ದಲಿತ ಮುಖಂಡರಾದ ವೆಂಕಟರಾಜು, ಶರತ್, ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net