ಮಹಾಪರಿನಿರ್ವಾಣ ದಿನಾಚರಣೆ ಡಿ.6ರಂದು

ambedkar
Published on

ಕಲಬುರಗಿ: ಜನವಾದಿ ಛಾತ್ರ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾ ಪರಿನಿರ್ವಾಣ ಆಚರಣೆ ಸಮಿತಿಯಿಂದ ಡಿ.೬ರಂದು ಮಧ್ಯಾಹ್ನ ೧೨ಕ್ಕೆ ನಗರದ ಡಾ.ಅಂಬೇಡ್ಕರ್ ಪುತ್ಥಳಿ ಎದುರು ಮಹಾಪರಿರ್ವಾಣ, ಚಳವಳಿ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಗೌರವಾಧ್ಯಕ್ಷ ರವೀಂದ್ರ ಶಾಬಾದಿ, ಅಧ್ಯಕ್ಷ ಪ್ರಬುದ್ಧ ಹುಬಳಿತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ೩೨೦ ಪುಟಗಳ ಚಳವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಬಿಕ್ಕುಣಿ ಸುಮನಾ ಸಾನ್ನಿಧ್ಯ ವಹಿಸಲಿದ್ದು, ಅಭಿಯಂತರ ಡಾ.ಸುರೇಶ ಶರ್ಮಾ ಕೃತಿ ಬಿಡುಗಡೆ ಮಾಡಲಿದ್ದಾರೆ. ಪಾಲಿಕೆ ವಲಯ ಆಯುಕ್ತ ರಮೇಶ ಪಟ್ಟೇದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಸುಬಾನೆ, ಮೇಯರ್ ವಿಶಾಲ ದರ್ಗಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಶಾಲ ನವರಂಗ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ಅಪ್ಪಗೆರೆ ಸೋಮಶೇಖರ ಕೃತಿ ಪರಿಚಯಿಸಲಿದ್ದಾರೆ. ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜಾತ, ಉಪನ್ಯಾಸಕರಾದ ಶರಣಬಸಪ್ಪ ವಡ್ಡನಕೇರಿ, ಡಾ.ಶ್ರೀಕೃಷ್ಣ ಚಕ್ರವರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಅಶ್ವಿನಿ ಮದನಕರ್, ಕಾಶೀನಾಥ ಮಾಳಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net