

ಬಸವನಬಾಗೇವಾಡಿ: ಶಿಕ್ಷಣ ಮತ್ತು ಜ್ಞಾನ ಮಾತ್ರ ನಮ್ಮನ್ನು ಬದಲಾಯಿಸಲು ಸಾಧ್ಯ ಎಂದು ತಿಳಿದ ಡಾ. ಬಿ. ಆರ್. ಅಂಬೇಡ್ಕರ್‌ರು ಇಡೀ ಶೋಷಿತ ಸಮಾಜದಲ್ಲಿ ಜಾಗೃತಿ ಮೂಡಿಸಿದರು ಎಂದು ಖ್ಯಾತ ವಾಗ್ಮಿ, ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ತಾಲೂಕಿನ ಹಂಗರಗಿ ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
12ನೇ ಶತಮಾನದ ಬಸವಾದಿ ಶರಣರು ಬಸವಣ್ಣನವರ ನೇತೃತ್ವದಲ್ಲಿ ನಡೆಸಿದ ಸಮಾಜ ಪರಿವರ್ತನೆ ಕ್ರಾಂತಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಆ ನಿಟ್ಟಿನಲ್ಲಿ ಅಂಬೇಡ್ಕರ್‌ರು ಶೋಷಣೆ ವಿರುದ್ಧ ನಿರಂತರ ಹೋರಾಡುತ್ತ ಮೌನ ಕಾಂತಿ ಮಾಡಿದರು ಎಂದು ಹೇಳಿದರು.
ಡಾ. ಯುವರಾಜ ಮಾದನಶೆಟ್ಟಿ ಮಾತನಾಡಿ, ಅಂಬೇಡ್ಕರ್‌ರು ಯಾವುದೇ ಜನಾಂಗಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲದ ಆಸ್ತಿಯಾಗಿದ್ದಾರೆ ಎಂದರು.
ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ, ಶ್ರೀಕಾಂತ ಕೋರಿ, ಚರಲಿಂಗ ಇಂಗಳೇಶ್ವರ ಮಾತನಾಡಿದರು.
ಬಸಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ನಾನಾಗೌಡ ಪಾಟೀಲ, ರಮೇಶ ಇಂಗಳೇಶ್ವರ, ರಾಮನಗೌಡ ಬಿರಾದಾರ, ರಮೇಶ ಇಂಗಳೇಶ್ವರ ಧ್ವಜಾರೋಹಣ ನೆರವೇರಿಸಿದರು.
ವಿರುಪಾಕ್ಷಿ ಕೋರಿ, ಶಿವಶಂಕರ ಪಡಶೆಟ್ಟಿ, ಈರಣ್ಣ ಮಸೂತಿ, ಪವಾಡೆಪ್ಪ ಮಾದರ, ಭೀಮಪ್ಪ ಮಾದರ, ಪ್ರವೀಣ ಮುಕಾರ್ತಿಹಾಳ, ಮಳಸಿದ್ದಪ್ಪ ಚಲವಾದಿ, ನಿಜಪ್ಪ ಚಲವಾದಿ ಇತರರಿದ್ದರು.
ನಿಜಪ್ಪ ಚಲವಾದಿ ಸ್ವಾಗತಿಸಿದರು. ಮಂಜುನಾಥ ಹಂಗರಗಿ ನಿರೂಪಿಸಿದರು. ಮಲಕಪ್ಪ ಚಲವಾದಿ ವಂದಿಸಿದರು.
ಬಸವನಬಾಗೇವಾಡಿ: ಬಸವ ಜಯಂತ್ಯುತ್ಸವದಂದು ರೇಣುಕ ಜಯಂತಿ ಆಚರಿಸಲು ಹೊರಟಿರುವ ವೀರಶೇವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ನಿಲುವು ಸರಿಯಾದ ಕ್ರಮವಲ್ಲ ಎಂದು ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಬಸವಣ್ಣನವರು ಲಿಂಗಾಯಿತ ಧರ್ಮ ಸಂಸ್ಥಾಪಕರಾಗಿದ್ದು, ಬಸವಣ್ಣನ ವಿಚಾರಗಳೇ ಬೇರೆ, ರೇಣುಕರ ವಿಚಾರಗಳೇ ಬೇರೆಯಾಗಿವೆ. ಬಸವ ಜಯಂತಿಯಂದು ಬಸವಣ್ಣನ ವಿಚಾರಗಳು ಜನಮನಕ್ಕೆ ಮುಟ್ಟಬೇಕೆ ಹೊರತು ಬೇರೆ ವಿಚಾರಗಳಲ್ಲ ಎಂದು ತಿಳಿಸಿದರು.