ಆಕಾಶವಾಣಿಯಲ್ಲಿ ಅಂಬೇಡ್ಕರ್ ಉಪನ್ಯಾಸ ಮಾಲಿಕೆ; ಪ್ರಶ್ನೆಗೆ ಉತ್ತರಿಸುವ ಅದೃಷ್ಟವಂತರಿಗೆ ಬಹುಮಾನ

ambedkar
Published on

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಭದ್ರಾವತಿ ಆಕಾಶವಾಣಿ ಸಹಯೋಗದಲ್ಲಿ ಸೆ.26ರಿಂದ ಪ್ರತಿ ಮಂಗಳವಾರ ಬೆಳಗ್ಗೆ 7.15ರಿಂದ 7.30ರವರೆಗೆ ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತ ವಿಶೇಷ 15 ಕಂತುಗಳ ಉಪನ್ಯಾಸ ಮಾಲಿಕೆ ಪ್ರಸಾರವಾಗಲಿದೆ.

ವಿಷಯ ತಜ್ಞರಾದ ಡಾ. ಎಸ್.ನರೇಂದ್ರಕುಮಾರ್, ಎಂ.ಎನ್.ಸುಂದರರಾಜ್, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಡಾ. ಜಗನ್ನಾಥ ಕೆ.ಡಾಂಗೆ, ಡಾ. ಶುಭಾ ಮರವಂತೆ, ಡಾ. ಹಾ.ಮ.ನಾಗಾರ್ಜುನ ಉಪನ್ಯಾಸ ನೀಡಲಿದ್ದಾರೆ.
ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಯನ್ನು ಕೇಳಲಾಗುವುದು. ಇದಕ್ಕೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಗುವುದು.
ಉತ್ತರವನ್ನು ಭದ್ರಾವತಿ ಆಕಾಶವಾಣಿ ಕೇಂದ್ರದ ವಾಟ್ಸ್‌ಆ್ಯಪ್(9481572600)ಗೆ ಅದೇ ದಿನ ಕಳುಹಿಸಬೇಕು. ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ ಎಫ್‌ಎಂ 103.5 ಹಾಗೂ ವಿಶ್ವದಾದ್ಯಂತ ನ್ಯೂಸ್ ಆನ್ ಏರ್ ಆ್ಯಪ್‌ನಲ್ಲಿ ಕೇಳಬಹುದು ಎಂದು ಕುವೆಂಪು ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net