

ಇಟಗಿ: ವಿವಿಧತೆಯಲ್ಲಿ ಏಕತೆ ಎಂಬುದೇ ದೇಶದ ಮೂಲ ತತ್ತ್ವ, ಜೀವನದ ಮೂಲ ಮೌಲ್ಯ. ನಾವೆಲ್ಲರೂ ಒಂದೇ ಎಂಬ ಮೂಲ ಸಿದ್ಧಾಂತವನ್ನು ನೀಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ಎಂದು ಹಾಸನ ಜಿಲ್ಲೆಯ ಬೇಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಬೈಲೂರು ಗ್ರಾಮದಲ್ಲಿ ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಯುವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿತ್ತೂರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ ಗಂಗೋಳ ಮಾತನಾಡಿ, ಸಾಮಾಜಿಕ ಅಭಿವದ್ಧಿಗೆ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ ಎಂದರು. ಬೈಲೂರು ಕೆಎಂಎ್ ಅಧ್ಯಕ್ಷ ಶಿವಾನಂದ ಹಣಮಸಾಗರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ, ಕಲ್ಲಪ್ಪ ಕಟಗಿ, ಬಸವರಾಜ ಲದ್ದಿಮಠ, ಗಂಗಾಧರ ಮೂಳಕೂರ, ಮಯೂರ ಗಿರಿಯಾಲ, ನಿಂಗಪ್ಪ ಮುಂದಿನಮನಿ, ಮಹಾಂತೇಶ ಇಟಗಿ, ಚಂದ್ರಪ್ಪ ದಂಡಿನ, ಸಂದೀಪ ಶಿವಣ್ಣವರ, ಗುಲಾಬ ಬಾಳೇಕುಂದ್ರಿ, ಸಂಗಮೇಶ ಹಿರೇಮಠ, ಈಶ್ವರ ಹಡಪದ, ಯಲ್ಲವ್ವ ಚನ್ನಬಸಪ್ಪನವರ, ರವಿಕುಮಾರ ಹೆಗಡೆನ್ನವರ, ಮಲ್ಲಪ್ಪ ಪೀಜೊಳ್ಳಿ, ಬಾಬು ಕಪೋಲಿ, ನಾಗೇಶ ಬೆಣ್ಣಿ, ಜಗದೀಶ ಅಂಗಡಿ ಇತರರಿದ್ದರು. ದೊಡ್ಡಪ್ಪ ಮಾದರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವೇಕ ಕುರಗುಂದ ನಿರೂಪಿಸಿದರು.