

ರಾಯಚೂರು ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಸಮಾನತೆ ಇರಬೆಕೆಂಬ ದೂರದೃಷ್ಠಿ ಕಲ್ಪನೆಯಿಂದ ಶ್ರೇಷ್ಠ ಸಂವಿಧಾನವನ್ನು ನೀಡಿದ್ದು, ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡ ಡಾ.ಬಿ.ಆರ್‌ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನದಿAದಲೇ ಇಂದು ಪ್ರತಿಯೊಬ್ಬರು ಎಲ್ಲಾ ರೀತಿಯ ಹಕ್ಕುಗಳು ಹಾಗೂ ಸಮಾನತೆ ಸಿಕ್ಕಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಮೇಲಾಗುತ್ತಿದ್ದ ಅನ್ಯಾಯದ ವಿg ಹೋರಾಡಿದ ಮಹಾನ್ ಚೇತನರಾಗಿದ್ದರು. ಅವರು ನೀಡಿದ ಸಂವಿಧಾನದ ಆದಾರದಲ್ಲಿಯೇ ಕಾಂಗ್ರೆಸ್ ಪಕ್ಷ ಮುಂದುವರೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಪ್ರಮುಖರಾದ ಜಯಂತರಾವ್ ಪತಂಗೆ, ಅಮರೇಗೌಡ ಅಂಚಿನಾಳ,ಶ್ರೀದೇವಿ ನಾಯಕ, ಅಬ್ದುಲ್ ಕರೀಂ, ಆಂಜನೇಯ್ಯ ಕುರುಬದೊಡ್ಡಿ, ಡಾ.ರಝಾಕ್ ಉಸ್ತಾದ್, ಭೀಮನಗೌಡ ನಾಗಡದಿನ್ನಿ, ಶಶಿಕಲಾ ಭೀಮರಾಯ, ವಕ್ ಬೋಡ್ ಅಧ್ಯಕ್ಷ -Àರೀದ್ ಖಾನ್ ಸೇರಿ ಅನೇಕರು ಇದ್ದರು.