

ಗುಳೇದಗುಡ್ಡ: ಸಂವಿಧಾನ ಶಿಲ್ಪಿ ಡಾ. ಬಿ.ಅರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಮಂಗಳಾ ಎಂ. ತಿಳಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೊಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏ. 5ರಂದು ಡಾ. ಬಾಬು ಜಗಜೀವನರಾಮ್ ಅವರ 118ನೇ ವರ್ಷದ ಜಯಂತಿಯನ್ನು ತಾಲೂಕಾಡಳಿತ ಕಚೇರಿಯಲ್ಲಿ ಆಚರಿಸಲಾಗುವುದು ಹಾಗೂ ಏ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಕರನಂದಿ ರಂಗಮಂದಿರದಲ್ಲಿ ಆಚರಿಸಲಾಗುವುದು ಎಂದರು.
ಸಮಾಜದ ಮುಖಂಡ ವೈ.ಆರ್. ಹೆಬ್ಬಳ್ಳಿ ಮಾತನಾಡಿ, ಏ.14ರಂದು ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಅಂಬೇಡ್ಕರ್ ಭವನದಿಂದ ಆರಂಭಗೊಂಡು, ನಗರದ ಪ್ರಮುಖ ಬೀದಿಗಳ ಮೂಲಕ ಕರನಂದಿ ರಂಗಮಂದಿರಕ್ಕೆ ತಲುಪಲಿದೆ. ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಸಮಾಜಕಲ್ಯಾಣ ಇಲಾಖೆಯ ಮಹಾಂತೇಶ ಮಳಿಮಠ, ಪುರಸಭೆ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ಮುಖ್ಯಾಧಿಕಾರಿ ಎ.ಎಚ್. ಮುಜಾವರ, ಪುರಸಭೆ ಸದಸ್ಯ ಯಲ್ಲಪ್ಪ ಮನ್ನಿಕಟ್ಟಿ, ಕಲ್ಲನಗೌಡ ಗೌಡರ, ಯಮನಪ್ಪ ದಳಪತಿ, ಯಮನಪ್ಪ ಹೊಸಮನಿ, ಕೀರಪ್ಪ ತಳವಾರ, ರಮೇಶ ಗಚ್ಚಿನಮನಿ, ರೆಡ್ಡಿ ಎಚ್. ನಡುವಿನಮನಿ, ಪ್ರಕಾಶ ಗಚ್ಚಿನಮನಿ, ವಿ.ಆರ್. ಚವ್ಹಾಣ, ವೈ.ವೈ. ನಡುವಿನಮನಿ, ಯಮನೂರ ನಡುವಿನಮನಿ, ಎಎಸ್‌ಐ ಎಸ್.ಐ ಬಿಳೆಕುದರಿ, ಸುರೇಶ ಜಾಧವ, ಎಸ್.ಬಿ. ಅತ್ತಾರ ಮತ್ತಿತರರಿದ್ದರು.