

ಮಂಗಳೂರು: ಅಂಬೇಡ್ಕರ್ ಗ್ರಂಥಾಲಯದ ಜ್ಞಾನ ಭಂಡಾರವನ್ನೇ ತಮ್ಮದಾಗಿಸಿಕೊಂಡವರು. ಅವರು ಒಬ್ಬ ಮಹಾಜ್ಞಾನಿ ಹಾಗೂ ಮಹಾ ಮೇಧಾವಿಯಾದ ಕಾರಣಕ್ಕೇ ಭಾರತದ ಸಂವಿಧಾನ ರಚಿಸುವ ಮೂಲಕ ‘ಸಂವಿಧಾನ ಶಿಲ್ಪಿ’ ಎಂದು ಖ್ಯಾತರಾದರು ಎಂದು ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ ಅಭಿಪ್ರಾಯಪಟ್ಟರು.
ಅವರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಗ್ರಂಥಾಲಯದಲ್ಲಿ ನಡೆದ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಹಾಗೂ ಗ್ರಂಥಾಲಯಕ್ಕಿರುವ ಈ ನಂಟಿನಿಂದಾಗಿ, ಅವರ ಜಯಂತಿಯನ್ನೂ ಗ್ರಂಥಾಲಯದಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಜಯಪ್ರಕಾಶ್ ವಹಿಸಿದ್ದರು. ಸುಧಾ, ಶೇಖರ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ದಿವ್ಯ ಎ. ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕ ಯತೀನ್ ವಂದಿಸಿದರು, ರಕ್ಷಿತಾ ನಿರೂಪಿಸಿದರು