ಒಂದು ಸಮುದಾಯಕ್ಕೆ ಅಂಬೇಡ್ಕರ್​ ಸೀಮಿತರಲ್ಲ

27 KLR 4
Published on

ಕೋಲಾರ: ಸಂವಿಧಾನದಡಿ ದಲಿತರಿಗೆ ಮಾತ್ರ ಮೀಸಲಾತಿ ಇದೆ ಎನ್ನುವ ತಪ್ಪುಕಲ್ಪನೆ ಹಾಗೂ ಅಪಪ್ರಚಾರ ಹೆಚ್ಚಿದೆ. ದೇಶದ ಎಲ್ಲ ವರ್ಗದ ಜನರಿಗೂ ಸಂವಿಧಾನ ಮೂಲಕ ಮೀಸಲಾತಿ ಕಲ್ಪಿಸಿದೆ ಎಂಬುವುದನ್ನು ಯಾರೂ ಮರೆಯಬಾರದು ಎಂದು ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಹೇಳಿದರು.

ತಾಲೂಕಿನ ಚಿನ್ನಾಪುರದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಯುವಕರ ಸಂಘದಿಂದ ವಿಶ್ವಜ್ಞಾನಿ ಅಂಬೇಡ್ಕರ್​ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ. ಅಂಬೇಡ್ಕರ್​ ಅವರು 2 ವರ್ಷ 11 ತಿಂಗಳು 17 ದಿನ ಪ್ರಪಂಚದ ಎಲ್ಲ ಸಂವಿಧಾನಗಳನ್ನು ಅಧ್ಯಯನ ಮಾಡಿ, ಅದರಲ್ಲಿನ ಅತ್ಯುತ್ತಮ ಅಂಶಗಳನ್ನು ತೆಗದುಕೊಂಡು, ಲಿಖಿತ ಸಂವಿಧಾನ ಬರೆದು ನಮಗೆ ಅರ್ಪಿಸಿದ್ದಾರೆ. ಇದನ್ನು ನೋಡಿ, ಕೆಲ ದೇಶಗಳು ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡಿವೆ. ಭಾರತ ಸಂವಿಧಾನ ಶೇಷ್ಠ ಗ್ರಂಥ. ಅಂಬೇಡ್ಕರ್​ ಅವರು ಆಡಳಿತ ಮತ್ತು ಕುಟುಂಬಕ್ಕೆ ಅಂಟಿಕೊಂಡವರಲ್ಲ. ಆಸೆ ಮತ್ತು ಆಮಿಷಕ್ಕೆ ಬಲಿಯಾದವರಲ್ಲ. ಆಯಾ ಜಾತಿಗಳಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಿ.ಕೆ ರಮೇಶ್​, ಪೋಲಿಸ್​ ಉಪ ಅಧೀಕ್ಷಕ ಎಂ.ಡಿ.ಎಚ್​.ನಾಗ್ತೆ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್​, ಪ್ರಾಂಶುಪಾಲ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀ ಮಂಜುನಾಥ್​, ಉಪಾಧ್ಯಕ್ಷ ಶಂಕರ್​, ಪಿಡಿಒ ಮಧುಮತಿ, ಕಾರ್ಯದರ್ಶಿ ಅಶ್ವತ್ಥ ಗೌಡ, ಸದಸ್ಯರಾದ ಸಿ.ವಿ.ನಾಗರಾಜ್​, ಲಕ್ಷ್ಮಮ್ಮ, ಮುಖಂಡರಾದ ಕೆ.ಎಂ.ಸಂದೇಶ್​, ಮೈಲಾಂಡಹಳ್ಳಿ ಮುರಳಿ, ಅನಿಲ್​ ಐಯ್ಯ, ಮಾರ್ಜೇನಹಳ್ಳಿ ಬಾಬು, ಯಲವಾರ ರಾಜಕುಮಾರ್​, ವೆಂಕಟಸ್ವಾಮಿ, ಚಿನ್ನಾಪುರ ಅನಿಲ್​, ಸುರೇಶ್​ ರಮೇಶ್​ ಇದ್ದರು.

ಸಂವಿಧಾನವೇ ಪವಿತ್ರ ಗ್ರಂಥ

ಸಮಾಜದಲ್ಲಿ ಅಂಬೇಡ್ಕರ್​ ಅವರ ಹಾದಿಯಲ್ಲಿ ಅಕ್ಷರ, ಚಿಂತನೆ, ಅಧ್ಯಯನ, ಬರವಣಿಗೆ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಅಂಬೇಡ್ಕರ್​ ಅವರು ನೀಡಿದ ಮೀಸಲಾತಿ ಶಿಕ್ಷಣದಿಂದಲೇ ಸಮಾಜದ ಉನ್ನತ ಸ್ಥಾನಗಳನ್ನು ಪಡೆಯಲು ಶೋಷಿತರಿಗೆ ಸಾಧ್ಯವಾಗಿದೆ. ಇಂದು ಶಾಸಕಾಂಗ, ಕಾರ್ಯಾಂಗದಲ್ಲೂ ಅವಕಾಶ ನೀಡಲಾಗಿದೆ. ಸಮಾಜದಲ್ಲಿ ಜಾತಿ ತಾರತಮ್ಯ ಬಿಟ್ಟು ಹೃದಯ ವೈಶಾಲ್ಯತೆಯಿಂದ ನೋಡಬೇಕಾಗಿದೆ. ಸಂವಿಧಾನವೇ ಎಲ್ಲ ಧರ್ಮಗಳಿಗೆ ಪವಿತ್ರ ಗ್ರಂಥವಾಗಬೇಕು ಎಂದು ಅನಿಲ್​ಕುಮಾರ್​ ತಿಳಿಸಿದರು.

ಆಚರಣೆಗಿಂತ ಅನುಕರಣ ಮುಖ್ಯ

ಹಿರಿಯ ಸಾಹಿತಿ ಕೋಟಗಾನಹಳ್ಳಿ ಕೆ.ರಾಮಯ್ಯ ಮಾತನಾಡಿ, ಹೆಣ್ಣು ಮಕ್ಕಳಿಗೆ ಘನತೆ ಹೆಚ್ಚಿಸಿದ ಕೀರ್ತಿ ಅಂಬೇಡ್ಕರ್​ ಅವರಿಗೆ ಸಲ್ಲಬೇಕು. ಇಂದು ಅಂಬೇಡ್ಕರ್​ ಬಗ್ಗೆ ಯಾರೊಬ್ಬರೂ ಓದುತ್ತಿಲ್ಲ, ಅಧ್ಯಯನಶೀಲರಾಗುತಿಲ್ಲ. ಗುಡಿ, ಪ್ರತಿಮೆ, ್ಲೆಕ್ಸ್​ಗಳನ್ನು ನೋಡದೇ ಗ್ರಂಥಾಲಯಗಳನ್ನು ಹೆಚ್ಚು ನೋಡುವಂತಾಗಬೇಕು. ಇತ್ತೀಚಿಗೆ ಅಂಬೇಡ್ಕರ್​ ಸಮುದಾಯ ಭವನಗಳು ಅಧಿಕಾರಿಗಳ ರ್ನಿಲಕ್ಷ$್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಅಚರಣೆ ಸುಲಭ, ಅನುಕರಣೆ ಮುಖ್ಯವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net