ಸಮಾನತೆಯ ಸಂವಿಧಾನ ನೀಡಿದ ಅಂಬೇಡ್ಕರ್

Ambedkar gave a constitution of equality
ಗುಳೇದಗುಡ್ಡದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಸಮಾನತೆಯ ಸಾಗರ ಕಾರ್ಯಕ್ರಮ ಆಚರಿಸಲಾಯಿತು. ಪೃಥ್ವಿಕುಮಾರ, ಡಾ. ಚಂದ್ರಕಾಂತ ಜವಳಿ, ಪ್ರಥಮೇಶ ವಾಘ್ಮೋಡೆ, ರವಿ ಉಪ್ಪಾರ, ಅಮಿತ ವಾಳದ, ದೀಪಕ ರಾಠೋಡ, ವಿಶ್ವನಾಥ ಕಳ್ಳಿಗುಡ್ಡ, ಮೈತ್ರೇಯಿ ರಾಜನಾಳ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿವ ಸಂವಿಧಾನವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ್ದಾರೆ. ಇಂದು ಸಾಮಾನ್ಯ ಕುಟುಂಬದ ವ್ಯಕ್ತಿ ಐಎಎಸ್ ಮಾಡಿ ಜನರಿಗೆ ನ್ಯಾಯಕೊಡುವ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಎಬಿವಿಪಿ ಕರ್ನಾಟಕ ಉತ್ತರ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಹೇಳಿದರು.

ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಸಮಾನತೆಯ ಸಾಗರ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಅಂಬೇಡ್ಕರ್ ಅವರು ತಾವು ಅನುಭವಿಸಿದ ಅಸ್ಪಶ್ಯತೆಯನ್ನು ಮುಂದೆ ನಮ್ಮ ಜನರು ಅನುಭವಿಸಬಾರದು ಎಂದು ಸಂವಿಧಾನದಲ್ಲಿ ಸಮಾನತೆ, ಸೋದರತೆಯನ್ನು ಅಳವಡಿಸಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ನಮಗೆಲ್ಲರಿಗೂ ಆದರ್ಶವಾಗಬೇಕು ಎಂದರು.

ಡಾ. ಚಂದ್ರಕಾಂತ ಜವಳಿ ಮಾತನಾಡಿ, ಅಂಬೇಡ್ಕರ್ ಅವರ ಬಾಲ್ಯ ಜೀವನ ನೋಡಿದಾಗ ಅವರು ಅಸ್ಪಶ್ಯತೆ ಅನುಭವಿಸಿದ್ದನ್ನು ನಾವು ನೋಡುತ್ತೇವೆ. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬೆಳೆದ ಅವರು, ಅಸ್ಪಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದ್ದರು ಎಂದರು.

ಉತ್ತರ ಕರ್ನಾಟಕ ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಪ್ರಥಮೇಶ ವಾಘ್ಮೋಡೆ, ನಗರ ಅಧ್ಯಕ್ಷ ರವಿ ಉಪ್ಪಾರ, ಕಾರ್ಯದರ್ಶಿ ಅಮಿತ ವಾಳದ, ದೀಪಕ ರಾಠೋಡ, ವಿಶ್ವನಾಥ ಕಳ್ಳಿಗುಡ್ಡ, ಮೈತ್ರೇಯಿ ರಾಜನಾಳ, ಸಮರ್ಥ ಜಿರ್ಲಿ, ಈರಣ್ಣ ಹಡಪದ, ಪವನ ಉಂಕಿ, ಗೌರೀಶ ಅಂಗಡಿ, ಪ್ರಥಮೇಶ ಪವಾರ, ಪ್ರತೀಕ ಅಂಗಡಿ, ರೂಪಾ ಸೊಪ್ಪಿಮಠ, ಪ್ರವೀಣ ರಾಠೋಡ, ಆಕಾಶ ಚವಾಣ, ಶಂಕ್ರಮ್ಮ ಮುರಗೋಡ, ನಾಗರತ್ನ ರಂಜಣಗಿ, ದೃಶಾಂತ ಹೂಲಗೇರಿ, ಸಂಜನಾ ಚಂದನ್ನವರ, ಸೌಂದರ್ಯ ಆರೂಟಗಿ, ಸಂಜನಾ ಬಾಪೂರಿ, ಸಂಗೀತ ಶಿರೂರ, ಸಂಜನಾ ಚಂದಾಪೂರ, ಮಂಜುಳಾ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net