ಅಂಬೇಡ್ಕರ್ ಸಮಾನತೆ ಬೆಳಗಿದ ದೀಪ

3Ravig4
ಬೆಳಗಾವಿ ನಗರದ ಜಯವಂತಿ ಮಂಗಲ ಕಾರ್ಯಾಲಯದಲ್ಲಿ ಛಲವಾದಿ ಯುವ ಸಂಘದಿಂದ ಭಾನುವಾರ ಶಾಸಕ ಆಸ್ೀ ಸೇಠ್ ಅವರನ್ನು ಸನ್ಮಾನಿಸಲಾಯಿತು. ಜಯಂತ ಜಾಧವ, ಯಲ್ಲಪ್ಪ ಕೋಲಕಾರ ಇದ್ದರು.
Published on

ಬೆಳಗಾವಿ: ಸಂವಿಧಾನ ಕರ್ತೃ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಮಾತ್ರವಲ್ಲದೆ ಇಡಿ ಜಗತ್ತಿಗೆ ಸಮಾನತೆ ಸಾರಿದ ದೀಪವಾಗಿದ್ದಾರೆ ಎಂದು ಶಾಸಕ ಆಸ್ೀ ಸೇಠ್ ಹೇಳಿದರು. ನಗರದ ಪಿ.ಬಿ.ರಸ್ತೆಯಲ್ಲಿರುವ ಜಯವಂತಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಛಲವಾದಿ ಯುವ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಅನುಭವಿಸಿದ ನೋವು, ಅವಮಾನ ಇನ್ನಿತರ ಕಿರುಕುಳಕ್ಕೆ ಪ್ರತಿರೂಪವಾಗಿ ಅವರು ಸಂವಿಧಾನ ರಚಿಸಿ ಪ್ರತ್ಯುತ್ತರ ನೀಡಿ ಸಮಾನತೆಯ ಮಾರ್ಗ ತೋರಿದ್ದಾರೆ ಎಂದರು. ಯುವಜನರು ದೇಶದ ಆಸ್ತಿ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಬೇಕು ಎಂದು ಸಲಹೆ ನೀಡಿದರು. ಪಾಲಿಕೆ ಸದಸ್ಯ ಜಯಂತ ಜಾಧವ, ಗೌರವಾಧ್ಯಕ್ಷ ಯಲ್ಲಪ್ಪ ಕೋಲಕಾರ, ಮಂಗೇಶ ಪವಾರ, ಭರತ್ ಪಾಟೀಲ, ಸಂದೀಪ ಜಿರಗ್ಯಾಳ, ಮಹಾಂತೇಶ ಜೀವೂರಗುಂಡಿ, ಯಲ್ಲಪ್ಪ ಕೋಲಕಾರ, ಮಹಾಂತೇಶ ಮ್ಯಾಗಿನಮನಿ, ಸವಿತಾ ಕಾಂಬಳೆ, ಶ್ರೀಶೈಲ ಕಾಂಬಳೆ, ಸಂತೋಷ ದೇವರಮನಿ, ಮಹೇಶ ಕೋಲಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net