ಸಮಾನತೆಗೆ ಜೀವನ ಮುಡಿಪಾಗಿಟ್ಟ ಅಂಬೇಡ್ಕರ್

Ambedkar dedicated his life to equality.
ಹೊರ್ತಿ ಸಮೀಪದ ಅರ್ಜನಾಳದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ದಲಿತ ಹಿರಿಯ ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿದರು. ಬಂತೇಜಿ ಸಂಗಾಪಾಲ ಧರ್ಮ ದರ್ಶನ ಬೀದರ, ಎಸ್.ಆರ್. ರುದ್ರವಾಡಿ, ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಸಣ್ಣಪ್ಪ ತಳವಾರ ಇತರರಿದ್ದರು.
Published on

ಹೊರ್ತಿ: ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ದಲಿತ ಹಿರಿಯ ಮುಖಂಡ ಅಭಿಷೇಕ ಚಕ್ರವರ್ತಿ ಎಂದರು.

ಸಮೀಪದ ಅರ್ಜನಾಳದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರ 134ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಸಿಗಬೇಕೆಂದು ಅಚಲ ಸಂಕಲ್ಪ ಹೊಂದಿದ್ದರು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬಂತೇಜಿ ಸಂಗಾಪಾಲ ಧರ್ಮ ದರ್ಶನ ಬೀದರ ಆಶೀರ್ವಚನ ನೀಡಿದರು.

ಎಸ್.ಆರ್. ರುದ್ರವಾಡಿ, ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಸಣ್ಣಪ್ಪ ತಳವಾರ, ಶೆಬ್ಬೀರ್ ಮುಲ್ಲಾ, ಶಂಕರಗೌಡ ಬಿರಾದಾರ, ಬ್ರಹ್ಮಾನಂದ ಪೂಜಾರಿ, ಚಿದಾನಂದಗೌಡ ಬಿರಾದಾರ, ಶಿವಪುತ್ರ ತಳವಾರ, ಆರ್. ಎಸ್. ಗೋಡೇಕಾರ, ಎನ್. ಟಿ. ಬಿರಾದಾರ, ಬಸಗೊಂಡ ಪಾಟೀಲ, ತಿಪ್ಪಣ್ಣ ಬನಸೋಡೆ, ಬಸಲಿಂಗ ಕಾಂಬಳೆ, ಅಪ್ಪಾಸಾಹೇಬ ಬನಸೋಡೆ, ಮಲ್ಲಕಾರಿ ಕಾಂಬಳೆ, ಸಂಜಯ ಬನಸೋಡೆ, ಯಲ್ಲಪ್ಪ ಬನಸೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net