ಅಂಬೇಡ್ಕರ್​ ಕೊಡುಗೆ ಅಪಾರ

16MNL2
Published on

ಮುನವಳ್ಳಿ: ಡಾ.ಬಾಬಾಸಾಹೇಬ್​ ಅಂಬೇಡ್ಕರ್​ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ದೇಶ ಮುನ್ನಡೆಯುತ್ತಿದ್ದು, ಅವರ ಕೊಡುಗೆ ಅಪಾರವಾಗಿದೆ ಎಂದು ಸಹಕಾರಿ ಧುರೀಣ ಪಂಚನಗೌಡ ದ್ಯಾಮನಗೌಡರ ಹೇಳಿದರು.

ಪಟ್ಟಣದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅಭಿಮಾನಿ ಬಳಗ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್​ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖಂಡ ಉಮೇಶ ಬಾಳಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಂಬೇಡ್ಕರ್​ ಶ್ರಮ ಸ್ಮರಣೀಯ ಎಂದರು.

ನಿರೂಪಾದಿ ವಾಸ್ಟರ, ಮಲ್ಲೇಶ ಸುಳೇಭಾವಿ, ಪುರಸಭೆ ಸದಸ್ಯರಾದ ಮೀರಾಸಾಬ್​ ವಟ್ನಾಳ, ಸಮಿವುಲ್ಲಾ ಚೂರಿಖಾನ, ಹನಮಂತ ಹಿರೇಮೇತ್ರಿ, ಶ್ರೀಶೈಲ ಹಂಜಿ, ಹನಮಂತ ಭಜಂತ್ರಿ, ಬುಡೆಪ್ಪ ಸಿಂಗನ್ನವರ, ಮಂಜು ದೇಶನೂರ, ಶಿವಾಜಿ ಪೋಳ, ಮಹಾಂತೇಶ ತೊರಗಲ್ಲ, ಮಹಾಂತೇಶ ಕಮಲಾಪುರ, ಕೀರಪ್ಪ ಭಜಂತ್ರಿ, ಸೋಮು ದೇವರಮನಿ, ಯಲ್ಲಪ್ಪ ಗುಂಜಿ, ಶಿವಲಿಂಗಪ್ಪ ಕುಂಬಾರ, ಪ್ರಕಾಶ ಕಮಲಾಪುರ, ಭವಾನಿ ಖೊಂದುನಾಯ್ಕ, ಬಾಳು ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net