ಅಂಬೇಡ್ಕರ್ ಜನ್ಮ ದಿನದಂದು ಮೆರವಣಿಗೆ

12-pnp 1
ಪಾಂಡವಪುರದಲ್ಲಿ ಆಯೋಜಿಸಿದ್ದ ದಲಿತ ಸಂಘನೆಗಳ ಸಭೆಯಲ್ಲಿ ಮುಖಂಡ ಕೆ.ಬಿ.ರಾಮು ಮಾತನಾಡಿದರು. ನಟರಾಜು, ಅರಸಯ್ಯ, ಕೆ.ಬಿ.ರಾಮು, ಟಿ.ಎಸ್.ಹಾಳಯ್ಯ, ರಮೇಶ್ ಇತರರು ಇದ್ದರು.
Published on

ಪಾಂಡವಪುರ: ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆಯೊಂದಿಗೆ ಏ.14ರಂದು ಅಂಬೇಡ್ಕರ್ ಜನ್ಮ ದಿನ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಮುಖಂಡ ಕೆ.ಬಿ.ರಾಮು ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಲಿತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಪಟ್ಟಣದ ಮಹಾಂಕಾಳೇಶ್ವರಿ ದೇವಸ್ಥಾನದ ಬಳಿ ಇರುವ ಅರಳಿಕಟ್ಟೆಯಿಂದ (ವಿ.ಸಿ.ನಾಲೆ ಪಕ್ಕ) ಮೆರವಣಿಗೆ ಹೊರಡಲಿದ್ದು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐದು ದೀಪದ ಬಳಿ ಸಮಾವೇಶಗೊಳ್ಳಲಿದೆ. ಬಳಿಕ ಅಂಬೇಡ್ಕರ್ ಫ್ಲೆಕ್ಸ್‌ಗೆ ಮಾಲಾರ್ಪಣೆ ಮಾಡಲಾಗುವುದು. ಲೇಖಕರು, ಪ್ರಗತಿಪರ ಚಿಂತಕರು, ದಲಿತ ಚಳವಳಿಯ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ವಿನೂತನ ಮೆರವಣಿಗೆ: ದಲಿತ ಸಂಘಟನೆಯ ಸಾವಿರಾರು ಕಾರ್ಯಕರ್ತರು, ದಲಿತ ಯುವಕರು ನೀಲಿ ಶಾಲು ಧರಿಸಿ, ಮೇಣದ ಬತ್ತಿ ದೀಪ ಹಿಡಿದು ಮೆರವಣಿಗೆಯಲ್ಲಿ ಸಾಗಲಿದ್ದಾರೆ ಎಂದು ಹೇಳಿದರು.

ಮುಖಂಡ ಎ.ಜಿ.ಬಸವರಾಜು ಮಾತನಾಡಿ, ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಿಗೆ ಆಹ್ವಾನವಿಲ್ಲ. ಅಂಬೇಡ್ಕರ್ ವಾದಿಗಳು, ದಲಿತ ಸಂಘಟನೆಗಳ ಕಾರ್ಯಕರ್ತರು, ದಲಿತ ಯುವಕರು, ಪ್ರಗತಿಪರ ಸಂಘಟನೆ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ದಲಿತ ಸಂಘಟನೆ ಮುಖಂಡರಾದ ಅರಸಯ್ಯ, ವಿಜಯಕುಮಾರ್, ಎಸ್.ಟಿ.ದೊಡ್ಡಯ್ಯವೆಂಕಟಯ್ಯ, ರಮೇಶ್, ಬ್ಯಾಡರಹಳ್ಳಿ ಪ್ರಕಾಶ್, ಡಿ.ಕೆ.ಅಂಕಯ್ಯ, ನಟರಾಜು, ಲೋಕೇಶ್, ಬಿ.ನಾಗರಾಜು, ಜೆ.ಅಂದಾಯ್ಯ, ಸಿದ್ದಲಿಂಗಯ್ಯ, ಹೊಸೂರು ಸ್ವಾಮಿ, ಎಂ.ವಿ.ಕೃಷ್ಣ, ಹನುಮಯ್ಯ, ಅರಳಕುಪ್ಪೆ ದೇವರಾಜು, ಎಚ್.ಜಿ.ಗೋವಿಂದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net