ನೂತನ ವಿನ್ಯಾಸದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ

minister mahadevapp
ಮೂಗೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು. ಎಂ.ಡಿ.ಬಸವರಾಜು, ಹ್ಯಾಕನೂರು ಉಮೇಶ್, ಎ.ಬಿ.ಮಂಜುನಾಥ್, ಎಂ.ಎನ್.ಸೋಮಣ್ಣ ಇದ್ದರು.
Published on

ಮೂಗೂರು: ಲಭ್ಯ ಇರುವ ಸ್ಥಳವನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸ ಯೋಜನೆ ರೂಪಿಸಿ ನೂತನ ವಿನ್ಯಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸುವಂತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಮೂಗೂರಿನಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ, ಸೆಸ್ಕ್ ಮಾದರಿ ವಿದ್ಯುತ್ ಯೋಜನೆ, ಚರಂಡಿ, ಕಾಂಕ್ರೀಟ್ ರಸ್ತೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಮುದಾಯ ಭವನಕ್ಕೆ ಆಗಮಿಸಿ ಸ್ಥಳಿಯ ಮುಖಂಡರ ಅಹವಾಲು ಆಲಿಸಿ ಮಾತನಾಡಿದರು.

ಸಮುದಾಯ ಭವನದ ಕಾಮಗಾರಿ ಆರಂಭಿಸುವ ಮುನ್ನ ನೀಡಿರುವ 75 ಲಕ್ಷ ರೂ. ಅನುದಾನ ಯೋಜನೆಗೆ ತಕ್ಕಂತೆ ಬಳಸಿ ಕೊರತೆ ಕಂಡು ಬಂದಲ್ಲಿ ಕೊಡಲೇ ನನ್ನ ಗಮನಕ್ಕೆ ತರಬೇಕು ಎಂದರಲ್ಲದೆ, ಸಮುದಾಯ ಭವನ ಕಾಮಗಾರಿ ತಕ್ಷಣವೇ ಆರಂಭ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಹ್ಯಾಕನೂರು ಉಮೇಶ್, ಪಿಎಸಿಸಿಬಿ ಮಾಜಿ ಅಧ್ಯಕ್ಷ ಎ.ಬಿ.ಮಂಜುನಾಥ್, ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಎಂ.ಎನ್.ಸೋಮಣ್ಣ, ಎಂ.ಬಿ.ಸಾಗರ್, ಡೇರಿ ನಾಗೇಂದ್ರ, ತೋಟದ ನಾಗಣ್ಣ, ಸಚಿವರ ಆಪ್ತ ಸಹಾಯಕರಾದ ಬಸವರಾಜು, ರಾಮಲಿಂಗು, ಗಣೇಶ್, ಪುರಸಭೆ ಮಾಜಿ ಅಧ್ಯಕ್ಷ ಮದನ್, ಗ್ರಾಪಂ ಮಾಜಿ ಸದಸ್ಯ ಎಂ. ರಾಜು ಮುಖಂಡರಾದ ಎಂ.ಎಂ.ಜಗದೀಶ್ ಚಿಕ್ಕಮಾದು, ಕೃಷ್ಣಸ್ವಾಮಿ, ದಿಲೀಪ್ ಸಿದ್ದರಾಜು ಹಾಗೂ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net