ವಕೀಲ ಹೇಮಂತ್‌ಕುಮಾರ್‌ಗೆ ಅಂಬೇಡ್ಕರ್ ಅವಾರ್ಡ್

ambedkar award
ದೆಹಲಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲ ಹೇಮಂತ್‌ಕುಮಾರ್ ಅವರಿಗೆ ‘ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-2022’ ನೀಡಿ ಗೌರವಿಸಲಾಯಿತು. ಡಾ.ಸತ್ಯನಾರಾಯಣ್ ಜತಿಯಾ, ರಮೇಶ್‌ಚಂದ್ರ ರತನ್, ಹೇಮಂತ್ ಗೋಡ್ಸೆ ಇದ್ದರು.
Published on

ಮೈಸೂರು: ನಗರದ ವಕೀಲ ಹೇಮಂತ್‌ಕುಮಾರ್‌ಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-2022’ ನೀಡಿ ಗೌರವಿಸಿದೆ.


ದೆಹಲಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಸತ್ಯನಾರಾಯಣ್ ಜತಿಯಾ, ರೈಲ್ವೆ ಬೋರ್ಡ್ ಛೇಮರ್ನ್ ರಮೇಶ್‌ಚಂದ್ರ ರತನ್, ಸಂಸದ ಹೇಮಂತ್ ಗೋಡ್ಸೆ ಇತರರು ಪ್ರಶಸ್ತಿ ಪ್ರದಾನ ಮಾಡಿದರು.

ಹೇಮಂತ್‌ಕುಮಾರ್ ಎಚ್.ಡಿ.ಕೋಟೆ ತಾಲೂಕಿನ ಜಿ.ಎಂ.ಹಳ್ಳಿಯವರು. ವಿದ್ಯಾರ್ಥಿ ದಿಸೆಯಿಂದಲೂ ಹಿಂದುಳಿದ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಇವರ ಸಮಾಜಮುಖಿ ಚಟುವಟಿಕೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net