

ಮಾನ್ವಿ: ದೇಶದ ಶ್ರೇಷ್ಠಗ್ರಂಥ ಸವಿಂಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದು ಶಿಕ್ಷಕ ಸಂಜೀವಪ್ಪ ಛಲವಾದಿ ಹೇಳಿದರು.
ಇದನ್ನೂ ಓದಿ:
ತಾಲೂಕಿನ ಗವಿಗಟ್ಟ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆಗೆ ಅಂಬೇಡ್ಕರ್ 110ನೇ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಪಶ್ಯತೆ, ಇತರ ಅನಿಷ್ಟ ಪದ್ಧತಿಗಳು, ಮೌಢ್ಯ ಆಚರಣೆಗಳನ್ನು ದಲಿತರು ತೊರೆಯಬೇಕು. ಗೊಡ್ಡು ಆಚರಣೆಗಳಿಂದ ಅಂಬೇಡ್ಕರ್ ದೂರ ಉಳಿದು ಸಾಧನೆಯತ್ತ ಸಾಗಿದರು. ಎಲ್ಲರೂ ಸಮಾನರು, ಜ್ಞಾನವೇ ಶ್ರೇಷ್ಠ ಎಂದು ಸಾರಿದ್ದು, ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಪ್ರಭಾರ ಅಧಿಕಾರಿ ಬಾಲಯ್ಯ ನಾಯಕ ಮಾತನಾಡಿ, ದಲಿತ, ಹಿಂದುಳಿದ ಮತ್ತು ಮಹಿಳೆಯರು ಶಿಕ್ಷಣ ಕಲಿತು ನೌಕರಿ ಪಡೆದು ಉತ್ತಮ ಜೀವನ ಸಾಗಿಸಲು ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ ಎಂದರು.
ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಪ್ರಮುಖರಾದ ಬಸವರಾಜ ಗವಿಗಟ್ಟ, ಯಮುನಪ್ಪ ಜಾಗೀರಪನ್ನೂರು, ಅಮರೇಶ ನಾಯಕ ಮಾನ್ವಿ, ಶರಣಪ್ಪ ನೀರಮಾನ್ವಿ, ಮಾರೆಪ್ಪ ಗವಿಗಟ್ಟ, ಉಮಾದೇವಿ, ಮಹೇಶ, ಶಿವಪ್ಪ ಗವಿಗಟ್ಟ ಇದ್ದರು.