

ತ್ಯಾಗರ್ತಿ: ಭಾರತದ ಸಂವಿಧಾನವನ್ನು ಬಹಳ ಆಸ್ಥೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಹಲವರು ಸೇರಿ ರಚಿಸಿದ್ದಾರೆ. ಇದನ್ನು ಕಾಪಾಡಿಕೊಳ್ಳುವ ಕಾಲಾಳುಗಳು ನಾವಾಗಬೇಕು ಎಂದು ವಕೀಲ ಸುದೀರ್ ಕುಮಾರ್ ಮುರೊಳ್ಳಿ ತಿಳಿಸಿದರು.
ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಎಜುಕೇಶನ್ ಟ್ರಸ್ಟ್ ಮತ್ತು ಡಿಜಿಟಲ್ ಮೀಡಿಯಾ ಪ್ರೆಸ್‌ಕ್ಲಬ್‌ನಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಮತ್ತು ವಿದ್ಯಾರ್ಥಿಗಳು ವಿಷಯ ಕುರಿತು ಉಪನ್ಯಾಸ ನೀಡಿದರು.
ಸಂವಿಧಾನ ಸಭೆ ಎಲ್ಲ ಸ್ತರದ ಜನರರನ್ನು ಒಳಗೊಂಡಿತ್ತು. ಅಂಬೇಡ್ಕರ್ ಕಾಯ್ದೆ ಹಾಗೂ ಗಾಂಧೀಜಿ ವಿವೇಕ ನಮ್ಮ ಆದರ್ಶ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂದು ಎಲ್ಲರಿಗೂ ಜಮೀನು, ಕೆಲಸ ಸಿಗುವಂತೆ ಮಾಡಿದ್ದು ನಮ್ಮ ಸಂವಿಧಾನ. ಇಂದು ನಾವು ನಮಗೆ ಬೇಕಾದ ದೇವರ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದು ನಮ್ಮ ಸಂವಿಧಾನ. ಪತ್ರಿಕಾ ಸ್ವಾತಂತ್ರ್ಯ ಕೊಟ್ಟಿದ್ದು ಸಂವಿಧಾನ. ಮಹಿಳೆಯರು, ಬಡವರು ಬದಲಾವಣೆಯ ಕನಸು ಕಾಣಲು ಸ್ಫೂರ್ತಿಯಾಗಿದ್ದು ಅಂಬೇಡ್ಕರ್ ಬರೆದ ಸಂವಿಧಾನ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಬಿಳಗಲ್ಲೂರು ಮಾತನಾಡಿದರು. ಕಾನೂನು ಕಾಲೇಜು ಪ್ರಾಚಾರ್ಯ ವಿ.ಎಸ್.ವಿನಯ್, ಎನ್‌ಎಸ್‌ಎಸ್ ಅಧಿಕಾರಿ ಜ್ಯೋತಿ ಆನಂದ್, ಚಾರ್ವಾಕ ರಾಘು, ನಾಗರಾಜ್ ಇತರರಿದ್ದರು.