ಭುವನಗಿರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ambedkar
Published on

ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ಪಕ್ಷದ ವತಿಯಿಂದ ಶುಕ್ರವಾರ ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ 134ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು, ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ಈ ದೇಶದ ಎಲ್ಲ ಜಾತಿ, ಧರ್ಮದ ಮಹಿಳೆಯರಿಗೆ, ಪುರುಷರಿಗೆ ಉತ್ತಮವಾದ ಸಂವಿಧಾನವನ್ನು ಬರೆದುಕೊಟ್ಟು ಯಾವುದೇ ಜಾತಿಯ ಜನರ ದ್ವೇಷ ಮಾಡದೆ ಪ್ರೀತಿಯಿಂದ ಸಹಬಾಳ್ಮೆಯಿಂದ ಒಗ್ಗಟ್ಟಾಗಿ ಈ ದೇಶವನ್ನು ನನ್ನ ಜನ ಆಳುವುದನ್ನು ನಾನು ನನ್ನ ಕಣ್ಣಿಂದ ನೋಡಬೇಕು ಎಂದರು. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮಕ್ಕಳ ಬದುಕನ್ನು ಉತ್ತಮ ರೀತಿಯಲ್ಲಿ ಶಿಕ್ಷಣ ಕೊಡಿಸುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ಮಾಡಬೇಕು. ಇತರ ಎಲ್ಲ ಜಾತಿಯ ಜನರನ್ನು ಅಂಬೇಡ್ಕರ್ ಹುಟ್ಟು ಹಬ್ಬದಂದು ಸೇರಿಸಿಕೊಂಡು ಅಂಬೇಡ್ಕರ್ ಜಯಂತಿ ಆಚರಣೆ ಮಾಡುವಂತಾಗಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾದ ನಾಯಕನಲ್ಲ ಎಂದರು.

ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮಾತಾನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡೋಣ ಎಮದು ಹೇಳಿದರು.

ಜಿಲ್ಲಾ ಸಂಚಾಲಕ ಬಿ. ಎಸ್. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂಡಿಗೆ ಗೋವಿಂದರಾಜ್, ರಮೇಶ್ ಅಂಬೇಡ್ಕರ್ ಬಗ್ಗೆ ಮಾತಾನಾಡಿದರು.

ಶೇಖರ್, ಪ್ರಸನ್ನ, ಅಜಿತ್, ರವಿ, ಅಜಯ್, ರವಿಕುಮಾರ್, ಪದ್ಮ, ಭವ್ಯ, ಕವಿತಾ, ಸುಮಾ, ನಿಂಗಜಮ್ಮ, ಪುಟ್ಟಲಕ್ಷ್ಮಿ, ಪವಿತ್ರ, ಅಂಕಿತ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net