

ಉಡುಪಿ: ಸರಳ ಕನ್ನಡದಲ್ಲಿ ಉನ್ನತ ವಿಚಾರಧಾರೆಯ ಚಿಂತನೆಗಳನ್ನು ಒಳಗೊಂಡಿರುವ ಚುಟುಕು ಸಾಹಿತ್ಯ ಪಠ್ಯಗಳ ಮೂಲಕ ಮಕ್ಕಳಿಗೆ ತಲುಪಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ಅಂಬಲಪಾಡಿ ರ್ಜನಾದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ. ನಿ.ಬಿ.ವಿಜಯ ಬಲ್ಲಾಳ್ ಸಲಹೆ ನೀಡಿದರು.
ಬುಧವಾರ ದೇವಸ್ಥಾನದ ಭವಾನಿ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ದಾಸವರೇಣ್ಯ ಪುರಂದರದಾಸರ ಆರಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ ಹೊಸ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡುತ್ತದೆ. ಜೊತೆಗೆ ಸಂಗೀತ, ನೃತ್ಯಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದರು. ಹಿರಿಯ ಚಿಂತಕ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕವಿ ನೆಂಪು ನರಸಿಂಹ ಭಟ್ಟ ಮುಖ್ಯ ಅತಿಥಿ ಯಾಗಿದ್ದರು. ಜಿಲ್ಲಾಧ್ಯಕ್ಷ ಪ್ರೊ.ಜಿ.ಯು.ನಾಯಕ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ರಾಜು ಎನ್. ಆಚಾರ್ಯ ನಿರೂಪಿಸಿದರು. ನಂತರ ಕಾಸರಗೋಡು ಗಡಿನಾಡ ಕನ್ನಡವಸಾಹಿತ್ಯ ಸಾಂಸತಿಕ ಸಂಘದ ಕಲಾವಿದರಿಂದ ದಾಸ ವೈಭವ ಗೀತ- ನೃತ್ಯ ಕಾರ್ಯಕ್ರಮ ನಡೆಯಿತು.
ವಿಚಾರಗೋಷ್ಠಿ
ಈ ಸಂದರ್ಭದಲ್ಲಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ವಿದ್ವಾನ ರಘುಪತಿ ಭಟ್ ಪುರಂದರ ದಾಸರ ಚಿಂತನೆಯನ್ನು ಹಂಚಿಕೊಂಡರು. ಡಾ.ಶಾಂತಾ ಪುತ್ತೂರು ಅತಿಥಿಯಾಗಿದ್ದರು. ಹಿರಿಯ ಕವಯಿತ್ರಿ ಸಾವಿತ್ರಿ ಮನೋಹರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಂಗಳೂರು ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಆಶಯ ಭಾಷಣ ಮಾಡಿದರು. ಸೋಮಶೇಖರ ಶೆಟ್ಟಿ ಅತಿಥಿಯಾಗಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರೇಮಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.