ಅಂಬಲಿ ಬಂಡಿಗೆ ಚಾಲನೆ

11
ಇಟಗಿ ಗ್ರಾಮದಿಂದ ಕಾದರವಳ್ಳಿ ಜ್ಞಾನಯಜ್ಞ ಕುಂಭಮೇಳ ಸಪ್ತಾಹಕ್ಕೆ ಕೊಂಡೊಯ್ಯುವ ಅಂಬಲಿ ಬಂಡಿಗೆ ಚಾಲನೆ ನೀಡಲಾಯಿತು. ಯಮನಪ್ಪ ಗುಡದನ್ನವರ, ಸಿದ್ದಪ್ಪ ಜೊತಗನ್ನವರ, ಇತರರಿದ್ದರು.
Published on

ಇಟಗಿ: ಸಮೀಪದ ಕಾದರವಳ್ಳಿ ಗ್ರಾಮದ ಅದಶ್ಯಾನಂದ ಆಶ್ರಮ ಸೀಮಿಮಠದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜ.14ರಿಂದ 20ರ ವರೆಗೆ ಜರುಗಲಿರುವ 87ನೇ ಜ್ಞಾನಯಜ್ಞ ಕುಂಭಮೇಳ ಸಪ್ತಾಹಕ್ಕೆ ಭಾನುವಾರ ಇಟಗಿ ಗ್ರಾಮದಿಂದ ಕೊಂಡೊಯ್ಯುವ ಅಂಬಲಿ ಬಂಡಿಗೆ ಚಾಲನೆ ನೀಡಲಾಯಿತು.

ಇಟಗಿ ಭಕ್ತರಿಂದ ದಾಸೋಹ ಸಾಮಗ್ರಿಗಳನ್ನು ಸಿಂಗರಿಸಿದ ಚಕ್ಕಡಿಯಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ಭಜನೆ ಹಾಗೂ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾದರವಳ್ಳಿ ಸೀಮಿ ಮಠವನ್ನು ತಲುಪಿತು.

ಗ್ರಾಮದ ಮನೆಮನೆಯವರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಯಮನಪ್ಪ ಗುಡದನ್ನವರ, ಸಿದ್ದಪ್ಪ ಜೊತಗನ್ನವರ, ನಿಂಗಪ್ಪ ಕರಮಳ್ಳನವರ, ಶಂಕರೆಪ್ಪ ಗೊಣಗಿ, ಅದಶ್ಯ ಗುಡದನ್ನವರ, ಬಾಳಪ್ಪ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net