ಅಂಬಾಭವಾನಿ ದೇವಿಗೆ ಬಂಗಾರದ ಕಿರೀಟ ಧಾರಣೆ

Ambabhavani Devi is crowned with a golden crown
Published on

ಮುಂಡರಗಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಿಗೆ ಬಂಗಾರದ ಕಿರೀಟ ಧಾರಣೆ ಹಾಗೂ ದಸರಾ ಉತ್ಸವದ ಘಟ ಸ್ಥಾಪನೆ ಹಿನ್ನೆಲೆಯಲ್ಲಿ ಸ್ಥಳೀಯ ಕೋಟೆ ಶ್ರೀ ಆಂಜನೇಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭಮೇಳ ಹಾಗೂ ಸಕಲ ಮಂಗಳ ವಾದ್ಯಮೇಳದೊಂದಿಗೆ ಆನೆಯ ಮೇಲೆ ಮಂಟಪದಲ್ಲಿ ದೇವಿಯ ಬಂಗಾರದ ಕಿರೀಟದ ಭವ್ಯ ಮೆರವಣಿಗೆ ಭಾನುವಾರ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.

ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಮಿತ್ರ ಮಂಡಳಿ, ಮಹಿಳಾ ಮಂಡಳಿ ಹಾಗೂ ಭಕ್ತ ಸಮೂಹ, ನಾಗರಿಕ ವೇದಿಕೆ, ವಿವಿಧ ಕಮಿಟಿಗಳ ಆಶ್ರಯದಲ್ಲಿ ಭಕ್ತ ಸಮೂಹ ಕೊಡುಗೆ ನೀಡಿದ ದೇವಿಯ ಬಂಗಾರದ ಕಿರೀಟಯನ್ನು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ, ಪ್ರಣವಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಿಗೆ ಧಾರಣೆ ಮಾಡಲಾಯಿತು.

ಘಟಸ್ಥಾಪನೆ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ವಿಶ್ವನಾಥ ಭಟ್ ಜೋಶಿ ದಂಪತಿ ಪೂಜಾ ಕಾರ್ಯ ನಡೆಸಿಕೊಟ್ಟರು. ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಸರ್ ಸಿದ್ದಪ್ಪ ಕಂಬಳಿ ವೃತ್ತ, ಜಾಗೃತ ವೃತ್ತ, ಗಾಂಧಿ ವೃತ್ತದ ಮೂಲಕ ದೇವಸ್ಥಾನ ತಲುಪಿತು.

ತಾಲೂಕು ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಅಶೋಕಸಾ ಶಿದ್ಲಿಂಗ, ಕಾರ್ಯದರ್ಶಿ ದೇವೆಂದ್ರಸಾ ಮಗಜಿ, ಬಾಲಚಂದಸಾ ಹಾದಿಮನಿ, ಸ್ವಾಮಿಸಾ ಪವಾರ, ಗಣೇಶ ಮಗಜಿ, ರಾಘವೇಂದ್ರ ಹಾದಿಮನಿ, ರಾಘು ಬಾಕಳೆ, ಸೋಮನಾಥಸಾ ಶಿಂದ್ಲಿಂಗ, ರವಿ ಶಿದ್ಲಿಂಗ, ಶಂಕರ ಬಾಕಳೆ, ಅಪ್ಪು ಖಟವಟೆ, ರಾಘು ಬದಿ, ರಾಧಾಕೃಷ್ಣಸಾ ಮೇಹರ್‌ವಾಡಿ, ಕಾಶಿನಾಥ ಕಲಬುರ್ಗಿ, ರಮೇಶ ಪವಾರ, ವಿಜಯ ಬಸವ, ಸುನಂದಾ ಮಗಜಿ, ಲಲಿತಾ ಶಿದ್ಲಿಂಗ್, ಉಮಾ ಬಾಳಕೆ, ರೇಣುಕಾ ಹಾದಿಮನಿ ಹಾಗೂಸಮಾಜದ ಪಂಚ ಟ್ರಸ್ಟ್ ಕಮಿಟಿ, ತರುಣಮಿತ್ರ ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net