ಕಾಳಗಿಯಲ್ಲಿ ಅಂಬಾ ಭವಾನಿ ಜಾತ್ರೋತ್ಸವ

PH 01
Published on

ಕಾಳಗಿ: ಪಟ್ಟಣದಲ್ಲಿ ಶ್ರೀ ಅಂಬಾ ಭವಾನಿ ದೇವಿ ಜಾತ್ರೋತ್ಸವ ನಿಮಿತ್ತ ಶನಿವಾರ ಅಪಾರ ಭಕ್ತರ ಮಧ್ಯೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿAದ ನಡೆದವು.

ನವರಾತ್ರಿ ನಿಮಿತ್ತ ದೇಗುಲದಲ್ಲಿ ಘಟಸ್ಥಾಪನೆ ಮಾಡಲಾಗಿತ್ತು. ವಿಜಯದಶಮಿಯಂದು ಸಿಮೋಲಂಘನೆ ನಡೆಯಿತು. ಬಳಿಕ ದೇವಿಯನ್ನು ಪಲ್ಲಂಗದ ಮೇಲೆ ಪ್ರತಿಷ್ಠಾಪಿಸಿ ಮಂದಿರ ಮುಚ್ಚಲಾಗಿತ್ತು. ಸೀಗಿ ಹುಣ್ಣಿಮೆಗೂ ಮುನ್ನ ದಿನವಾದ ಶುಕ್ರವಾರ ರಾತ್ರಿ ಜಗದೀಶ ಮಾಲಿಪಾಟೀಲ್ ಮನೆಯಲ್ಲಿ ಆರತಿ ಪಡೆಯಲಾಯಿತು. ರೇವಣಸಿದ್ದ ಕಲಶೆಟ್ಟಿ ಮನೆಯಿಂದ ದಿವಟಗಿ, ವಿದ್ಯಾಸಾಗರ ಹಣಕುಣಿ ಮನೆಯಿಂದ ದೇವಿ ಅರ್ಚನೆ ಸಾಮಾಗ್ರಿ, ಸುಭಾಷ ಕದಮ ಮನೆಯಿಂದ ಕಳಸ, ಸಂತೋಷಿ ಪವಾರ್ ಮನೆಯಿಂದ ದೇವಸ್ಥಾನದ ಬೀಗದ ಕೈಯನ್ನು ಅದ್ದೂರಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು.
ಅರ್ಚಕ ಸುರೇಶ ಬಾಂಬೆ, ದೇಗುಲದ ಪ್ರಮುಖರಾದ ಮಯೂರ ಶೇಗಾಂವಕಾರ್, ಪವನ್ ಮಹಾರಾಜ, ಶರಣು ಹಣಕುಣಿ, ಶೇಖರ ಕಲಶೆಟ್ಟಿ ನೇತೃತ್ವದಲ್ಲಿ ದೇವಸ್ಥಾನದ ಬಾಗಿಲು ತೆರೆದು ಅಂಬಾಭವಾನಿ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಅಲಂಕಾರ, ಸರಸ್ವತಿ ಹೋಮ, ಮಹಾ ಮಂಗಳಾರತಿ ಮಾಡಿ ಗರ್ಭಗುಡಿಯಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ಶನಿವಾರ ಬೆಳಗ್ಗೆ ಮಲಘಾಣ, ಕೋಡ್ಲಿ, ಭರತನೂರ, ರಾಜಾಪುರ, ಮಂಗಲಗಿ, ಕೊಡದೂರ, ಗೋಟೂರ, ಸೂಗೂರ (ಕೆ) ಸೇರಿ ಹಲವು ಗ್ರಾಮ ಹಾಗೂ ತಾಂಡಾಗಳಿAದ ಅಪಾರ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಪ್ರಮುಖರಾದ ಸುಭಾಷ ಕದಂ, ತುಳಸಿರಾಮ ಚವ್ಹಾಣ್, ವಿಶ್ವನಾಥ ಬಾಂಬೆ, ಸುರೇಶ ಶೇಗಾಂವಕಾರ್, ರಾಘವೇಂದ್ರ ಗುತ್ತೇದಾರ್, ಪ್ರಶಾಂತ ಕದಂ, ಮಹೇಶ ಶೇಗಾಂವಕಾರ್, ಲP್ಷÀ್ಮಣ ಡಪ್ಪೂರ, ದೇವಿಂದ್ರ ಕದಮ, ಅನೀಲಕುಮಾರ ಪವಾರ್, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ ಗುರಮಠಕಲï, ವಿಜಯಕುಮಾರ ಹಳ್ಳಿ, ಅನೀಲಕುಮಾರ ಮಾಲಿಪಾಟೀಲ್, ಸೂರ್ಯಕಾಂತ ಕಟ್ಟಿಮನಿ, ರಾಜೇಂದ್ರ ಗುತ್ತೇದಾರ್, ಹಣಮಂತ ಶೇಗಾಂವಕಾರ್, ಪರಮೇಶ್ವರ ಮಡಿವಾಳ, ಜಗನ್ನಾಥ ಚಂದನಕೇರಿ, ಖಾಜಾ ಮಾಸ್ಟರ್, ಮಂಜುನಾಥ ಹೆಬ್ಬಾಳ, ದತ್ತು ಗುತ್ತೇದಾರ್, ಶಿವಾನಂದ ಕದಮ, ಮಹೇಶ ಮೊರೆ, ಅಶೋಕ ಕುಡ್ಡಳ್ಳಿ, ಗೀರಿಶ ಸಿಂಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net