ಅಮೇಜಾನ್​ನಲ್ಲಿ ಹೂಡಿಕೆ ಹೆಸರಿನಲ್ಲಿ ವಂಚನೆ

Crime Logo
Published on

ಹಾವೇರಿ: ಅಮೇಜಾನ್​ ಡಿಸ್ಟ್ರುಬೂಟರ್​ ಬಿಸಿನೆಸ್​ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 2.2 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕ್ರೆೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರಿನ ಈಶ್ವರ ನಗರದ ಚಿಕ್ಕರಾಜ ಬೆನ್ನೂರ ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ವೈಷ್ಣವಿ ಎಂಬುವರು ಫೋನ್​ ಮಾಡಿ ಅಮೇಜಾನ್​ ಡಿಸ್ಟ್ರುಬೂಟರ್​ ಬಿಸಿನೆಸ್​ಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂದು ನಂಬಿಸಿ ಅವರ ಮಾಹಿತಿ ಪಡೆದು 2.2 ಲಕ್ಷ ರೂ. ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net