ಅಮರಗೋಳ ಬಸವೇಶ್ವರ ಜಾತ್ರೆ

Published on

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಶ್ರೀ ಕೊಟ್ಟೂರು ಬಸವೇಶ್ವರ ಜಾತ್ರೆ ಹಾಗೂ ಗ್ರಾಮದೇವಿಯರ ಉಡಿ ತುಂಬುವ ಕಾರ್ಯಕ್ರಮ ಏ. 27ರಿಂದ ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿದೆ.

ನಿತ್ಯ ಸಂಜೆ ಹಾವೇರಿಯ ಅಗಡಿ ಅಕ್ಕಿಮಠದ ಶ್ರೀ ಡಾ. ಗುರುಲಿಂಗ ಸ್ವಾಮೀಜಿ ಅವರು ಅನುಭವ ದರ್ಶನ ಪ್ರವಚನ ನೀಡುವರು. ಏ. 27ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣಪುರ ಶ್ರೀ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು.

ಏ. 28ರಂದು ಸಂಜೆ 7ಕ್ಕೆ ಗದಗ ಜ್ಞಾನಯೋಗಾಶ್ರಮದ ಶ್ರೀ ಬಸವಸಮರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಏ. 29ರಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಕೀರ ಸಿದ್ದರಾಮ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರವಚನದ ನಂತರ ನಿತ್ಯ ಅನ್ನಪ್ರಸಾದ ಸೇವೆ ಇರಲಿದೆ.

ಏ. 30ರಂದು ಬೆಳಗ್ಗೆ 6.15ಕ್ಕೆ ಶ್ರೀ ಕೊಟ್ಟೂರು ಬಸವೇಶ್ವರ ಹಾಗೂ ದುಂಡಿ ಬಸವೇಶ್ವರ ರುದ್ರಾಭಿಷೇಕ, ಮಧ್ಯಾಹ್ನ 12.15ಕ್ಕೆ ಪಲ್ಲಕ್ಕಿ ಉತ್ಸವ, ಎತ್ತುಗಳ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ 57ನೇ ಮಹಾರಥೋತ್ಸವ ಸಂಭ್ರಮದಿಂದ ನಡೆಯಲಿದೆ.

ಮೇ 1ರಂದು ಬೆಳಗ್ಗೆ 11.30ಕ್ಕೆ ಕೊಟ್ಟೂರು ಬಸವೇಶ್ವರ ಹಾಗೂ ನೀಲಮ್ಮದೇವರ ಲಗ್ನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net