

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಅಧ್ಯಾಪಕನಗರದಲ್ಲಿರುವ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮಠದಲ್ಲಿ ಸಿದ್ದಪ್ಪಜ್ಜನ 165ನೇ ಜಯಂತಿ ಉತ್ಸವದ ಅಂಗವಾಗಿ ಶುಕ್ರವಾರ ಸಂಜೆ ಮಹಾರಥೋತ್ಸವ ಭಕ್ತ ಸಮೂಹದ ಮಧ್ಯೆ ನೆರವೇರಿತು.
ಭಕ್ತರ ಹರ್ಷೋದ್ಘಾರ, ಜಯಘೋಷಗಳ ಮಧ್ಯೆ ಸಾವಿರಾರು ಜನರು ರಥ ಎಳೆದರು. ಭಕ್ತರು ಉತ್ತತ್ತಿ, ಬಾಳೆ ಹಣ್ಣು, ಬೆಂಡು ಬೆತ್ತಾಸು ರಥಕ್ಕೆ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಅಮರಗೋಳ, ನವನಗರ, ಗಾಮನಗಟ್ಟಿ, ಭೈರಿದೇವರಕೊಪ್ಪ, ಉಣಕಲ್ಲ, ರಾಯಾಪುರ, ತಾರಿಹಾಳ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಜಯಂತಿ ಅಂಗವಾಗಿ ಬೆಳಗ್ಗೆ ಶ್ರೀ ಸಿದ್ದಪ್ಪಜ್ಜನ ಮೂರ್ತಿಗೆ ಅಭಿಷೇಕ, ಅಲಂಕಾರ ಮಾಡಲಾಗಿತ್ತು. ತೊಟ್ಟಿಲೋತ್ಸವ, ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮಧ್ಯಾಹ್ನ ಹಾಗೂ ಸಂಜೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.