

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಶ್ರೀ ಸಿದ್ದೇಶ್ವರ ಯುವಕ ಮಂಡಳಿಯವರು ನಾರಾಯಣಪುರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಮಹಾಗಣಪತಿಯ ಮಹಾಪೂಜೆ ಸೆ. 24ರಂದು ಹಮ್ಮಿಕೊಳ್ಳಲಾಗಿದೆ. ಅಂದು ಉತ್ತರ ಕರ್ನಾಟಕ ಶೈಲಿಯ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
11ನೇ ವರ್ಷದ ಸಾರ್ವಜನಿಕ ಗಜಾನನ ಉತ್ಸವದಲ್ಲಿ ನಿತ್ಯ ಸಂಜೆ ಮಹಾಗಣಪತಿ ಪೂಜೆ ನಡೆಯುತ್ತಿದೆ. ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ. 28ರಂದು ಕರ್ನಾಟಕದ ಪ್ರಸಿದ್ಧ 11 ಸಾಂಸತಿಕ ಕಲಾ ತಂಡಗಳೊಂದಿಗೆ ಮಹಾಗಣಪತಿಯ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಯುವಕ ಮಂಡಳಿ ಸದಸ್ಯರು, ಗ್ರಾಮದ ಹಿರಿಯರು ಮನವಿ ಮಾಡಿದ್ದಾರೆ.