ಅಮರೇಶ್ವರ ದೇವಸ್ಥಾನ ಹುಂಡಿಯಲ್ಲಿ 2,000 ರೂ. ನೋಟ್ ಪತ್ತೆ

1GRGNT1
ಗುರುಗುಂಟದ ಅಮರೇಶ್ವರ ದೇವಸ್ಥಾನದ ಹುಂಡಿಯಲ್ಲಿನ ಹಣ ಎಣಿಕೆ ಮಾಡುತ್ತಿರುವುದು.
Published on

ಗುರುಗುಂಟ: 2,000 ರೂ. ನೋಟು ಅಮಾನ್ಯಗೊಳ್ಳುವ ಭೀತಿಯಲ್ಲಿ ಅಮರೇಶ್ವರ ದೇವಸ್ಥಾನದ ಹುಂಡಿಯನ್ನು ತಹಶೀಲ್ದಾರ್ ಶಂಶಾಲಂಸಾಬ್ ಸಮ್ಮುಖದಲ್ಲಿ ಶನಿವಾರ ತೆರೆದು ಹಣ ಎಣಿಕೆ ಮಾಡಲಾಗಿದೆ.

27,16,550 ರೂ. ಹಣ, ಚಿನ್ನದ ಚೈನ್, ಸಣ್ಣ ಸಣ್ಣ ತಾಳಿ ಗುಂಡು, ಹಾಗೂ 200 ಗ್ರಾಂ ಬೆಳ್ಳಿ ಆಭರಣಗಳು ಇದ್ದು, ಏಳು 2000 ನೋಟುಗಳು ದೊರತಿವೆ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಪ್ರತಿ ವರ್ಷ ಹುಂಡಿ ತೆರೆದಗ 14,000ರೂ. ನಷ್ಟವಾಗುತ್ತಿತ್ತು.

ಗ್ರೇಡ್-2 ತಹಶೀಲ್ದಾರ್ ಝಳಕಿಮಠ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರತ್ನಕ್ಕ, ಗುರುಗುಂಟ ಉಪತಹಶಿಲ್ದಾರ್ ರಂಗಪ್ಪನಾಯಕ, ಆರ್ ಐ ರಾಘವೇಂದ್ರ ಕೊಪ್ಪದ, ಕಂದಾಯ ಇಲಾಖೆಯ ಸಾಗರ, ಹನುಮಂತ, ಚನ್ನದಾಸರ ವೆಂಕನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net