ಧರ್ಮನಿಷ್ಠೆ ಆಚರಣೆಗಳು ಮಾದರಿಯಾಗಲಿ

background1121
Published on

ಗುರುಗುಂಟಾ: ಧರ್ಮವನ್ನು ಪರಿಶುದ್ಧ ಆಚಾರ, ವಿಚಾರ ಮತ್ತು ನಿಷ್ಠೆಯಿಂದ ಆಚರಿಸಿದಾಗ ಮಾತ್ರ ನಮ್ಮನ್ನು ರಕ್ಷಿಸಲಿದೆ ಎಂದು ಅಮರೇಶ್ವರ ಗುರು ಅಭಿನವಗಜದಂಡ ಶಿವಾಚಾರ್ಯ ಹೇಳಿದರು.

ಸಮೀಪದ ದೇವರಭೂಪೂರ ಗ್ರಾಮದ ಗುರುಗುಂಟಾ ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಲಿಂಗೈಕ್ಯ ವೇ.ಮೂ.ತ್ರಿಪುರಾಂತಯ್ಯಸ್ವಾಮಿಗಳ ಪ್ರಥಮ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಚಿಂತನಾಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಪುಣ್ಯರಾಧನೆ ಅಂದರೆ ಅವರು ಮಾಡಿದ ಪುಣ್ಯದ ಕಾರ್ಯಗಳನ್ನ ಆರಾಧಿಸಿ, ಜೀವಿತಾವಧಿಯ ಸದ್ಗುಣಗಳನ್ನು ನೆನಪಿಸಿಕೊಳ್ಳುವುದಾಗಿದೆ. ಧರ್ಮನಿಷ್ಠೆ ಆಚರಣೆಗಳು ಇತರ ಜಂಗಮರಿಗೆ ಮಾದರಿಯಾಗಲಿ ಎಂದರು.

ಅಮರೇಶ್ವರ ದೇವರ ಅರ್ಚಕರಾದ ಗಂಗಾಧರಯ್ಯಸ್ವಾಮಿ, ಸಿದ್ದಯ್ಯಸ್ವಾಮಿ, ಪ್ರಮುಖರಾದ ಗಜದಂಡಯ್ಯಸ್ವಾಮಿ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಹಿರೇಮಠ, ಅಮರೇಶ ಸ್ವಾಮಿ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net