ಕರ್ನಾಟಕದಲ್ಲಿ ನೋ ಯಡಿಯೂರಪ್ಪ... ನೋ ಬಿಜೆಪಿ ಎಂದ ಕಾಂಗ್ರೆಸ್​ ಶಾಸಕ ಅಮರೇಗೌಡ ಬಯ್ಯಾಪುರ!

1127569
Published on

ಕೊಪ್ಪಳ: ಬಿಜೆಪಿ‌ ಸರ್ಕಾರ ಕರ್ನಾಟಕದಲ್ಲಿ ಉಳಿಯಬೇಕಾದರೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಕಾರಣ ಎಂದು ಕಾಂಗ್ರೆಸ್​ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು ಜಾರಕಿಹೊಳಿನೇ ಯಡಿಯೂರಪ್ಪ ಅವರನ್ನು ಸಿ.ಎಂ ಮಾಡಿದ್ದು. ಅವರು ಯಡಿಯೂರಪ್ಪರನ್ನು ತಗೀತಾರೆ ಅಂತಾ ನನಗೆ ಅನಿಸುತ್ತಿಲ್ಲ. ಬಿಜೆಪಿ‌ ಸರ್ಕಾರ ಕರ್ನಾಟಕದಲ್ಲಿ ಉಳಿಯಬೇಕಾದರೆ, ಯಡಿಯೂರಪ್ಪ ಕಾರಣ. ಕರ್ನಾಟಕದಲ್ಲಿ ನೋ ಯಡಿಯೂರಪ್ಪ, ನೋ ಬಿಜೆಪಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಾರ್​ ವಿಚಾರವಾಗಿ ಮಾತನಾಡಿದ ಅವರು ನಮ್ಮಲ್ಲಿ‌ 8 ರಿಂದ 10 ಜನ ಸಿಎಂ ಆಗೋ ಯೋಗ್ಯತೆ ಇರುವವರು ಇದ್ದಾರೆ. ಅಭಿಮಾನಿಗಳು ಅವರ ಹೆಸರು ಹೇಳಿದ್ದಾರೆ. ಅದರಲ್ಲೇನು ಅಪರಾಧ ಇಲ್ಲ. ನಾವು ಈಗಲೇ ಬಿಜೆಪಿಗೆ ಆಹಾರ ಆಗೋದು ಬೇಡಾ ಎಂದು ಅಮರೇಗೌಡ ಸಹಲೆ ನೀಡಿದರು.

ರಮೇಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಬಹುದು. ಮೊದಲಿನಂದಲೂ ಅವರು ಕಾಂಗ್ರೆಸ್​ನಲ್ಲಿದ್ದವರು, ಅವರಿಗೆ ಬಿಜೆಪಿ ಗರ್ಭಗುಡಿ ಸಂಸ್ಕೃತಿ ಒಗ್ಗಲ್ಲ ಅಂತಾ ನನಗೆ ಅನ್ನಿಸ್ತಿದೆ. ಏಕೆಂದರೆ, ಅವರು ಹಾಗೂ ಸ್ನೇಹಿತರು ಬಾಂಬೆಗೆ ಹೋಗಿದ್ದರು. ಮುಂದಿನ ದಿನಗಳಲ್ಲಿ ಅವರು ಬೇರೆ ಪಕ್ಷಕ್ಕೆ ಹೋದ್ರೂ ಅಚ್ಚರಿ ಇಲ್ಲ ಎಂದರು.

ಜೆಡಿಎಸ್​ಗೂ ಹೋಗಬಹುದು ಅಥವಾ ಕಾಂಗ್ರೆಸ್​ಗೂ ಬರಬಹುದು. ರಾಜಕಾರಣ ಅಂದರೆ ನಿಂತ ನೀರಲ್ಲ. ಸಮಯ ಬಂದ ಹಾಗೆ ಬದಲಾಗೋದು ಸಹಜ. ಆದ್ರೆ, ಇದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೇಸರ ತರಿಸಿದೆ. ಇವತ್ತು ಯಾರು ಯಾವ ಪಕ್ಷದಲ್ಲಿ ಇರ್ತಾರೆ ಅನ್ನೋದು ಗಂಭೀರವಾದ ವಿಷಯ ಅಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net