

ಹುಕ್ಕೇರಿ: ಸ್ಥಳೀಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಹಾಗೂ ತಾಲೂಕಾಡಳಿತದ ಆಶ್ರಯದಲ್ಲಿ ಬುಧವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು.
ವಿಶ್ವಕರ್ಮ ಸಮುದಾಯದ ತಾಲೂಕಾಧ್ಯಕ್ಷ ಗಜಾನನ ಬಡಿಗೇರ ಮಾತನಾಡಿದರು.
ಬೀದರ ವಿಶ್ವಕರ್ಮ ಸಮುದಾಯದ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆ.ಬಿ.ಬಡಿಗೇರ, ಸಂತೋಷ ಬಡಿಗೇರ, ಈರಪ್ಪ ಬಡಿಗೇರ, ಗಣಪತಿ ಬಡಿಗೇರ, ರಾಜು ಬಡಿಗೇರ, ಶಿವಾನಂದ ಕಮ್ಮಾರ, ಶಂಕರ ಪತ್ತಾರ, ಶಿಕ್ಷಕ
ಕೆ.ಎ.ಬಡಿಗೇರ ಇತರರು ಇದ್ದರು.