ಮಂಡ್ಯ ನಗರದ ವೃತ್ತವೊಂದಕ್ಕೆ ಜಕಣಚಾರಿ ಹೆಸರಿಡಲು ಮನವಿ

20_11_Mdy_Manavi
Published on

ಮಂಡ್ಯ: ಮಂಡ್ಯ ನಗರಸಭೆ ವ್ಯಾಪ್ತಿಯ ಒಂದು ವೃತ್ತಕ್ಕೆ ಅಮರಶಿಲ್ಪಿ ಜಕಣಚಾರಿ ಹೆಸರನ್ನು ನಾಮಕರಣಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಶುಕ್ರವಾರ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವಕರ್ಮ ಸಮುದಾಯದ ಮೂಲಪುರುಷ ಅಮರಶಿಲ್ಪಿ ಜಕಣಚಾರಿ ಅವರು ಹಲವರು ವಿಶಿಷ್ಟ ಮತ್ತು ವೈವಿದ್ಯಮಯ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ನಾಡು ಮತ್ತು ದೇಶದ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಅವರು ನಿರ್ಮಿಸಿರುವ ದೇವಾಲಯಗಳು ಇಂದಿಗೂ ಪ್ರಸಿದ್ದ ಪ್ರವಾಸಿ ತಾಣವಾಗಿವೆ ಎಂದರು.
ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ ನಾಡಿನ ಸಾಂಸ್ಕೃತಿಕ ಪಿತಮಹಾ ಎಂದರೂ ತಪ್ಪಾಗಲಾರದು. ಈಗಾಗಲೇ ಸರ್ಕಾರ ಜ.1ರಂದು ಅವರ ಸಂಸ್ಮರಣಾ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಕರ್ನಾಟಕ ಬಾರ್ ಅಥವಾ ನೂರಡಿ ರಸ್ತೆಯ ಕನ್ನಿಕಾ ಪರಮೇಶ್ವರಿ ದೇವಾಯಲ, ಮೈ-ಬೆಂ ಹೆದ್ದಾರಿ ಕಲ್ಲಹಳ್ಳಿ, ತಾವರಕೆರೆಯ ಉದಯಗಿರಿ ವ್ಯಾಪ್ತಿಯ ಯಾವುದಾದರೂಂದು ವೃತ್ತಕ್ಕೆ ಅವರ ಹೆಸರನ್ನು ಇಡುವ ಮೂಲಕ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದರು.
ಮಹಾಸಭಾದ ಬಸವರಾಜು, ಕುಮಾರಸ್ವಾಮಿ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net