ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ನಾಳೆ

16M.D.R.5 THAILURU ANANNADACHARI
ತೈಲೂರು ಆನಂದಚಾರಿ
Published on

 ಮದ್ದೂರು: ಜಿಲ್ಲಾ ಮಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆಗೆ ಜಿಲ್ಲಾಡಳಿತ ತೀರ್ಮಾನಿಸಿದ್ದು, ಜ.18 ರಂದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಕ್ರಮ ಸ್ವಾಗತಾರ್ಹ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾ ಉಸ್ತುವಾರಿ ತೈಲೂರು ಆನಂದಾಚಾರಿ ತಿಳಿಸಿದ್ದಾರೆ.

ಜಿಲ್ಲೆಯ 7 ತಾಲೂಕಿನಿಂದ ಸಮಾಜದ 45 ಮಂದಿ ಸಾಧಕರನ್ನು ಗುರುತಿಸಿ ಅವರಲ್ಲಿ ಮದ್ದೂರು ತಾಲೂಕಿನ ಕೆಸ್ತೂರು ಸಿದ್ದರಾಜು, ಕೊಣಸಾಲೆ

ಪುಟ್ಟಸ್ವಾಮಾಚಾರ್, ಕೋಡಿಹಳ್ಳಿ ರಾಮಚಂದ್ರು, ತೈಲೂರು ದೇವರಾಜು ಮಣಿಗೆರೆ ಧರ್ಮಲಿಂಗು ಹಾಗೂ ನಾಗರಾಜಾಚಾರ್ ಅವರನ್ನು ಆಯ್ಕೆಮಾಡಿರುವುದು ಸಂತಸ ತಂದಿದೆ. ಇದಕ್ಕೆ ಕಾರಣರಾದ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net