ಅಮರ ಮಧುರ ಪ್ರೇಮ ನಾಟಕ ಪ್ರದರ್ಶನ

Amar Madhu Prema Drama Performance
ನಗೆನಾಟಕ ಅಮರ ಮಧುರ ಪ್ರೇಮ ನಾಟಕದ ದೃಶ್ಯ. ಪಾತ್ರದಾರಿಗಳಾದ ಡಾ. ಯಶವಂತ ಸರದೇಶಪಾಂಡೆ, ವೀಣಾ ಸುಂದರ್ ಹಾಗೂ ಸುಂದರ್ ವೀಣಾ ಇದ್ದಾರೆ.
Published on

ವಿಜಯಪುರ: ಖ್ಯಾತ ರಂಗತಜ್ಞ ಡಾ. ಯಶವಂತ ಸರದೇಶಪಾಂಡೆ ಅವರ ನೂತನ ನಗೆ ನಾಟಕ 'ಅಮರ ಮಧುರ ಪ್ರೇಮ' (ಮಾಗಿದವರ ಮದುವೆ ಕಥೆ) ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮೇ 17 ರಂದು ಸಂಜೆ 6-30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಪಾಟೀಲ್ ಇಂಜಿನಿಯರಿಂಗ್‌ನ ಮಾಲೀಕರಾದ ಎಸ್.ಬಿ. ಪಾಟೀಲ್ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಮುಖ್ಯಸ್ಥ ದೇಸಾಯಿ ತಿಳಿಸಿದ್ದಾರೆ.

ಪುಣೆಯ ಹೇಮಂತ ಎದಲಾಬಾದಕರ ರಚಿಸಿದ ಈ ನಾಟಕವನ್ನು ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕನ್ನಡ ರಂಗಭೂಮಿ, ಕಿರುತೆರೆ, ಸಿನಿಮಾ ಕಲಾ ದಂಪತಿಗಳಾದ ವೀಣಾ ಸುಂದರ್ ಹಾಗೂ ಸುಂದರ್ ವೀಣಾ ಅವರು ತಮ್ಮ ಮನೋಜ್ಞ ಅಭಿನಯದಿಂದ ರಂಗಪ್ರೇಮಿಗಳನ್ನು ರಂಜಿಸಲಿದ್ದಾರೆ.

ಹುಬ್ಬಳ್ಳಿಯ ಪ್ರಸಿದ್ಧ ಜವಳಿ ವ್ಯಾಪಾರಿಗಳಾದ 'ಗಂಗಾವತಿ ಸಿಲ್ಕ್ ಪ್ಯಾಲೇಸ್ ಪ್ರಯೋಜಕತ್ವದಲ್ಲಿ ಗಂಗಾವತಿ ರೇಷ್ಮೆ ರಂಗೋತ್ಸವ' ಹೆಸರಿನಲ್ಲಿ ವಿಜಯಪುರದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಅರ್ಪಿಸುತ್ತಿದ್ದು, ಗುರು ಇನ್‌ಸ್ಟಿಟ್ಯೂಟ್, ಹುಬ್ಬಳ್ಳಿ ತಂಡ, ನಾಟಕವನ್ನು ಪ್ರದರ್ಶಿಸುತ್ತಿದೆ. ಪ್ರೇಕ್ಷಕರನ್ನು ರಂಗ ಮಂದಿರಗಳಿಗೆ ಮರಳಿ ಕರೆತರುವುದಕ್ಕಾಗಿ ನಾಟಕ ವೀಕ್ಷಿಸಲು ಆಗಮಿಸುವ ಅದೃಷ್ಟವಂತ ಪ್ರೇಕ್ಷಕನಿಗೆ ಸಾವಿರಾರು ರೂ. ಮೌಲ್ಯದ ಬೆಲೆಯ ಸಿಲ್ಕ್ ಸೀರೆಯನ್ನು ನೀಡಿ ಗೌರವಿಸುತ್ತಿರುವುದು ವಿಶೇಷ.

ಪ್ರವೇಶ ಪತ್ರಗಳನ್ನು ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಕಚೇರಿಯಲ್ಲಿ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9686656077 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net